ಮಂಗಳೂರು: ದುಬೈನಿಂದ ಬರುತ್ತಿದ್ದ ಓರ್ವ ಪ್ರಯಾಣಿಕನನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಆತನಿಂದ 14.55 ಲಕ್ಷ ರೂ.ಗಳ ಚಿನ್ನವನ್ನು ಜಪ್ತಿ ಮಾಡಲಾಗಿದೆ.
ಬಂಧಿತನನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಆರಿಶ್ ಎಂದು ಗುರುತಿಸಲಾಗಿದೆ. ಈತ ದುಬೈನಿಂದ ಎಸ್‌ಜಿ 146 ಸ್ಪೈಸ್ ಜೆಟ್ ಮೂಲಕ ಮಂಗಳೂರಿಗೆ ಆಗಮಿಸಿದ್ದ. ಆತನನ್ನು ಶೋಧಿಸಿದಾಗ ಆಟಿಕೆಗಳು, ಟ್ರಿಮ್ಮರ್, ವಾಟರ್ ಡಿಸ್ಪೆನ್ಸರ್ ಮತ್ತು ಜ್ಯೂಸರ್‌ಗಳಲ್ಲಿ ಚಿನ್ನವನ್ನು ಅಡಗಿಸಿಟ್ಟು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ್ದ. ಈತನಿಂದ 14.55 ಲಕ್ಷ ಮೌಲ್ಯದ 300 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.