ಕೇರಳದ ತಿರುವನಂತಪುರಂನ ಪ್ರಸಿದ್ಧ ಶ್ರೀಪದ್ಮನಾಭಸ್ವಾಮಿ
ದೇವಸ್ಥಾನಕ್ಕೆ ಭಾರತ ತಂಡದ ಆಟಗಾರರು ಹಾಗೂ ಸಿಬ್ಬಂದಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಕೊನೆಯ ಹಾಗೂ 3ನೇ ಏಕದಿನ ಪಂದ್ಯಕ್ಕೂ ಮುನ್ನ ಶ್ರೀಪದ್ಮನಾಭ ಸ್ವಾಮಿಯ ದರ್ಶನವನ್ನು ಟೀಮ್ ಇಂಡಿಯಾ ಪ್ಲೇಯರ್ಸ್ ಪಡೆದರು.
ಸದಾ ಸ್ಟೇಡಿಯಂನಲ್ಲಿ ಬ್ಲೂ ಜೆರ್ಸಿ, ಪ್ಯಾಂಟ್, ಕ್ಯಾಪ್‌ನಲ್ಲಿ ಕಾಣಿಸುತ್ತಿದ್ದ ಪ್ಲೇಯರ್ಸ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ವಿಶೇಷವಾದ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಹೌದು.. ಸಂಕ್ರಾಂತಿ ಸಂಭ್ರಮ ಎಲ್ಲೆಡೆ ಕಳೆಗಟ್ಟಿದೆ. ಇದರ ನಡುವೆ
ಎಲ್ಲ ಆಟಗಾರರು ಹಾಗೂ ಸಿಬ್ಬಂದಿ ಬಿಳಿ ಬಣ್ಣದ ಪಂಚೆ, ಶಾಲು ಧರಿಸಿ ದೇವರ ದರ್ಶನ ಪಡೆದಿರುವುದು ಸ್ಪೆಷಲ್ ಎನಿಸಿತು. ಇದೇ ವೇಳೆ ದೇವಾಲಯದ ಆಡಳಿತ ಮಂಡಳಿ ಕೂಡ ಆಟಗಾರರಿಗೆ ಸಹಕಾರ ನೀಡಿದೆ ಎನ್ನಲಾಗಿದೆ.




























