ಪುತ್ತೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು ಫೆ.11 ರಂದು ಪುತ್ತೂರಿಗೆ ಆಗಮಿಸುತ್ತಿದ್ದು, ತೆಂಕಿಲದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಈ ಹಿನ್ನೆಲೆ ಸ್ವಾಗತ ಕೋರಿ ಪುತ್ತೂರಿನಲ್ಲಿ ಫ್ಲೆಕ್ಸ್ ಗಳನ್ನು ಅಳವಡಿಸುತ್ತಿದ್ದು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಅವರ ಅಭಿಮಾನಿಗಳು ಬೃಹತ್ ಫ್ಲೆಕ್ಸ್ ವೊಂದನ್ನು ಅಳವಡಿಸಿದ್ದಾರೆ.
ಪುತ್ತೂರಿನ ಗಾಂಧಿ ಕಟ್ಟೆಯ ಸಮೀಪ ಅಮಿತ್ ಶಾ ಅವರಿಗೆ ಸ್ವಾಗತ ಕೋರಿ ಸುಮಾರು 15 ಅಡಿ ಎತ್ತರದ 30 ಅಡಿ ಅಗಲದ ಬೃಹತ್ ಪ್ಲೆಕ್ಸ್ ಅನ್ನು ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಅವರ ಅಭಿಮಾನಿಗಳು ಅಳವಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬೃಹತ್ ಫ್ಲೆಕ್ಸ್ ಚಿತ್ರಗಳು ಹರಿದಾಡುತ್ತಿದ್ದು, ಹಲವರು ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ವಿಧಾನ ಸಭಾ ಚುನಾವಣೆಗೆ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಥಾನವನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರಿಗೆ ನೀಡಬೇಕೆನ್ನುವ ವಿಚಾರ ಈಗಾಗಲೇ ಮುನ್ನಲೆಗೆ ಬಂದಿದ್ದು, ಈ ಬಗ್ಗೆ ಪುತ್ತಿಲ ರವರ ಅಭಿಮಾನಿ ಬಳಗದವರು ಟ್ವೀಟರ್ ಅಭಿಮಾನ ಕೂಡ ನಡೆಸುತ್ತಿದ್ದಾರೆ..
ಶಾಸ್ತ ಆಲ್ಯೂಮಿನಿಯಂ -ಫ್ಲೆಕ್ಸ್ ಬೋರ್ಡ್ ನವರು ಈ ಬೃಹತ್ ಫ್ಲೆಕ್ಸ್ ಅನ್ನು ಸಿದ್ಧಗೊಳಿಸಿದ್ದಾರೆ.
