ಸವಣೂರು: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸವಣೂರು ವಲಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿ. ಕಡಬ, ನವಜೀವನ ಸಮಿತಿ ಹಾಗೂ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಸವಣೂರು ವಲಯ ಇದರ ಆಶ್ರಯದಲ್ಲಿ ‘ಹೊಂಗಿರಣ ಟ್ರೋಫಿ-2023’ ನವಜೀವನ ಸದಸ್ಯರಿಗೆ, ಒಕ್ಕೂಟದ ಸದಸ್ಯರಿಗೆ ಕ್ರೀಡಾಕೂಟ ಹಾಗೂ ಪ್ರೇರಣಾ ಶಿಬಿರ ಫೆ.5 ರಂದು ಬೆಳಗ್ಗೆ 10 ರಿಂದ ಸವಣೂರಿನ ಪ್ರಿಯಕಾರಿಣಿ ಸಭಾಭವನದಲ್ಲಿ ನಡೆಯಲಿದೆ.

ನವಜೀವನ ಸದಸ್ಯರಿಗೆ, ಒಕ್ಕೂಟದ ಸದಸ್ಯರಿಗೆ ಕ್ರೀಡಾಕೂಟ ಹಾಗೂ ಪ್ರೇರಣಾ ಶಿಬಿರ ಸಮಾರಂಭದ ಉದ್ಘಾಟನೆ ಬೆಳಿಗ್ಗೆ 10 ಗಂಟೆಯಿಂದ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪುತ್ತೂರು ತಾಲೂಕು ಅಧ್ಯಕ್ಷರಾದ ಮಹಾಬಲ ರೈ ಒಳತ್ತಡ್ಕ ರವರು ನಿರ್ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸವಣೂರು ವಲಯದ ಅಧ್ಯಕ್ಷರಾದ ರಾಮಚಂದ್ರ ಗೌಡ ಇಡ್ಯಡ್ಕ ರವರು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೀವಿ ವಿ. ಶೆಟ್ಟಿ, ಸವಣೂರು ಪುದುಬೆಟ್ಟು ಜಿನ ಮಂದಿರ ಅಧ್ಯಕ್ಷರಾದ ಶತ್ರುಂಜಯ ಆರಿಗ, ಅಗಳಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಉದಯ ರೈ ಮಾದೋಡಿ, ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೋಹಿತಾಕ್ಷ ಕೆ, ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ತೇಜಾಕ್ಷಿ ಕೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸವಣೂರು ವಲಯದ ಸದಸ್ಯರಾದ ಲೋಕನಾಥ ವಜ್ರಗಿರಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ಅಧ್ಯಕ್ಷರಾದ ಪ್ರಕಾಶ್ ಮಾಲೆತ್ತಾರು ರವರು ಆಗಮಿಸಲಿದ್ದಾರೆ.
ಮಧ್ಯಾಹ್ನ 12 ರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಕಾರ್ಯಾಧ್ಯಕ್ಷರಾದ ಗಿರಿಶಂಕರ ಸುಲಾಯ ರವರು ವಹಿಸಲಿದ್ದಾರೆ. ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದ ಸಂಚಾಲಕರು, ವಕೀಲರಾದ ಮುರಳಿಕೃಷ್ಣ ಕೆ.ಎನ್. ಚಳ್ಳಂಗಾರು ಉಪನ್ಯಾಸ ನೀಡಲಿದ್ದಾರೆ.
ಅತಿಥಿಗಳಾಗಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ ಕುಮಾರಮಂಗಲ, ದಕ್ಷಿಣ ಕನ್ನಡ ಯುವಜನ ಒಕ್ಕೂಟ ಮಂಗಳೂರಿನ ಅಧ್ಯಕ್ಷರಾದ ಸುರೇಶ್ ರೈ ಸೂಡಿಮುಳ್ಳು, ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಲಿತಾ ದರ್ಖಾಸು, ಸವಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶೀನಪ್ಪ ಶೆಟ್ಟಿ ನೆಕ್ರಾಜೆ, ಕಾಣಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ಉದನಡ್ಕ, ಸವಣೂರು ಗ್ರಾಮ ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸವಣೂರು ವಲಯದ ಸದಸ್ಯರಾದ ಅರವಿಂದ ಪುಣ್ಚತ್ತಾರು ರವರು ಆಗಮಿಸಲಿದ್ದಾರೆ.

ಮಧ್ಯಾಹ್ನ 3 ಗಂಟೆಯಿಂದ ಸಮಾರೋಪ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮ ಸಭಾಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸವಣೂರು ವಲಯದ ಅಧ್ಯಕ್ಷರಾದ ಮಹೇಶ್ ಕೆ. ಸವಣೂರು ರವರು ವಹಿಸಲಿದ್ದಾರೆ.
ಪ್ರಧಾನ ಭಾಷಣವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ ರವರು ಮಾಡಲಿದ್ದಾರೆ.
ಮುಖ್ಯಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ರಿ. ಕಡಬದ ಯೋಜನಾಧಿಕಾರಿ ಮೇದಪ್ಪ ನಾವೂರು, ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷರಾದ ದಿನೇಶ್ ಮೆದು, ಸವಣೂರು ಪ್ರಾ.ಕೃ.ಪ.ಸ.ಸಂ. ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಸವಣೂರು ಅಶ್ವಿನಿ ಫಾರ್ಮ್ಸ್ ನ ರಾಜಾರಾಮ್ ಪ್ರಭು, ಸವಣೂರು ಶ್ರವಣರಂಗ ಪ್ರತಿಷ್ಠಾನ ಸಂಚಾಲಕರಾದ ತಾರಾನಾಥ ಸವಣೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸವಣೂರು ವಲಯದ ನಿಕಟ ಪೂರ್ವ ವಲಯಾಧ್ಯಕ್ಷ ವೇಣುಗೋಪಾಲ ಕಳುವಾಜೆ, ಸವಣೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಇಂದಿರಾ ಬಿ.ಕೆ. ರವರು ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..