ವಿಟ್ಲ: ಕಡಂಬು – ಅನ್ನಮೂಲೆ ರಸ್ತೆ ಹಾಗೂ ಬಸವನಗುಡಿ ರಸ್ತೆ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದ್ದು, ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ. ಇನ್ನೇನು ಕೆಲ ದಿನಗಳಲ್ಲಿ ನೂತನ ಕಾಂಕ್ರೀಟ್ ರಸ್ತೆಯು ಸಾರ್ವಜನಿಕರ ಓಡಾಟಕ್ಕೆ ಮುಕ್ತವಾಗಲಿದೆ.

ನಗರೋತ್ಥಾನದಡಿಯಲ್ಲಿ ಕಡಂಬು – ಅನ್ನಮೂಲೆ ರಸ್ತೆ ಅಭಿವೃದ್ಧಿಗೆ 12 ಲಕ್ಷ ರೂ., ಬಸವನಗುಡಿ ರಸ್ತೆ ಅಭಿವೃದ್ಧಿಗೆ 8 ಲಕ್ಷ ರೂ. ಅನುದಾನವನ್ನು ಶಾಸಕ ಸಂಜೀವ ಮಠಂದೂರು ರವರು ಒದಗಿಸಿದ್ದು, ಈ ಅನುದಾನ ಒದಗಿಸುವಲ್ಲಿ 12ನೇ ವಾರ್ಡ್ ನ ಪಟ್ಟಣ ಪಂಚಾಯತ್ ಸದಸ್ಯರಾದ ಹರೀಶ್ ಸಿ. ಎಚ್. ರವರ ಸಹಕರಿಸಿದ್ದು, ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ರಸ್ತೆ ದುರಸ್ಥಿ ನಡೆಸಿ ನೂತನ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಸಹಕರಿಸಿದ ಹರೀಶ್ ಸಿ. ಹೆಚ್ ರವರಿಗೆ ಸಾರ್ವಜನಿಕರು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ..