ಪುತ್ತೂರಿನ ಆರ್.ಟಿ.ಓ ನೋಂದಾಯಿತ ಬೈಕೊಂದು ಹುಣಸೂರು ಬಳಿ ಅಪಘಾತಕ್ಕೀಡಾಗಿದೆ ಎಂದು ತಿಳಿದು ಬಂದಿದೆ.
KA21 EC-4500 ನಂಬರ್ ನ Fz ಬೈಕ್ ಅಪಘಾತವಾಗಿದ್ದು, ಪುತ್ತೂರು ಮೂಲದ ಯುವಕರಿಬ್ಬರು ಗಂಭೀರ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಸ್ಥಳದಲ್ಲಿ ದೊರೆತಿರುವ ಆಧಾರ್ ಕಾರ್ಡ್ ಆಧಾರದಲ್ಲಿ ಇಬ್ಬರಲ್ಲಿ ಓರ್ವನನ್ನು ಪುತ್ತೂರು ರೆಂಜಲಾಡಿಯ ಸಾಬೀತ್ ಎಂದು ಗುರುತಿಸಲಾಗಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ಕರೆ ತರಲಾಗುತ್ತದೆ ಎಂದು ತಿಳಿದು ಬಂದಿದೆ..
