ಪುತ್ತೂರು: ಮುಖ್ಯೋಪಾಧ್ಯಾಯರಿಗೆ ಹಾಗೂ ಶಾಲಾ ಎಸ್.ಡಿ.ಎಂ.ಸಿ ಅವರಿಗೆ ತಿಳಿಸದೆ ಶಾಲಾ ಮಕ್ಕಳನ್ನು ಶಿಕ್ಷಕಿಯೋರ್ವರು ಪ್ರವಾಸಕ್ಕೆ ಕರೆದುಕೊಂಡು ಹೋದ ಘಟನೆ ದ.ಕ.ಜಿ.ಪಂ. ಸರಕಾರಿ ಹಿ.ಪ್ರಾ. ಶಾಲೆ ಚಿಕ್ಕಮುಡ್ನೂರು, ಬೀರ್ನಹಿತ್ಲು ನಲ್ಲಿ ನಡೆದಿದೆ.

ಚಿಕ್ಕಮುಡ್ನೂರು, ಬೀರ್ನಹಿತ್ಲು ಸರಕಾರಿ ಶಾಲೆಯ ಮೂರನೇ ತರಗತಿ ಮತ್ತು ಒಂದನೇ ತರಗತಿ ಮಕ್ಕಳನ್ನು ಶಿಕ್ಷಕಿಯೋರ್ವರು ಮುಖ್ಯೋಪಾಧ್ಯಾಯರಿಗೆ ಹಾಗೂ ಶಾಲಾ ಎಸ್.ಡಿ.ಎಂ.ಸಿ ಹಾಗೂ ಸಹ ಶಿಕ್ಷಕರಿಗೆ ಹೇಳದೆ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ಪೋಷಕರು ಮತ್ತು ಸಾರ್ವಜನಿಕರು ಆರೋಪಿಸಿದ್ದಾರೆ.
ಶಾಲೆಯಲ್ಲಿ ಪತ್ರವೊಂದನ್ನು ಇಟ್ಟಿದ್ದು, ಅದರಲ್ಲಿ ಪ್ರವಾಸ ಹೋಗುವ ಬಗ್ಗೆ ಬರೆದಿದ್ದು, ಪುತ್ತೂರಿನ ಅಸುಪಾಸಿನ ಕೆಲ ಸ್ಥಳಗಳನ್ನು ಅದರಲ್ಲಿ ಉಲ್ಲೇಖಿಸಲಾಗಿದೆ.

ಶಾಲೆಗೆ ಆಗಮಿಸಿದ ಪೋಷಕರು ಮತ್ತು ಸಾರ್ವಜನಿಕರು ಸಹ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ ಅವರ ಬಳಿ ಈ ಬಗ್ಗೆ ವಿಚಾರಿಸಿದ್ದು, ಅವರು ನಮಗೆ ಈ ಬಗ್ಗೆ ತಿಳಿದಿಲ್ಲ, ಮುಖ್ಯೋಪಾಧ್ಯಾಯರ ಗಮನಕ್ಕೂ ತಿಳಿಸದೆ ಮಕ್ಕಳನ್ನು ಕರೆದುಕೊಂಡು ಹೋಗಿದ್ದು, ಚಿಕ್ಕ ಮಕ್ಕಳಾಗಿದ್ದರಿಂದ ಅವರ ಏನಾದರೂ ತೊಂದರೆಯಾದರೆ ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ. ಪೋಷಕರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.