ಪುತ್ತೂರು: ಶ್ರೀ ಧೂಮಾವತಿ ಯುವಕ ಮಂಡಲ ರಿ. ಜುಮಾದಿಪಲ್ಕೆ-ಪಡ್ನೂರು ಇದರ ಆಶ್ರಯದಲ್ಲಿ, ದಿ. ವಾಸು ನಾಯ್ಕ್ ಮುಂಡಾಜೆ ಮತ್ತು ದಿ. ಡೊಂಬಯ್ಯ ಗೌಡ ಕಡ್ತಿಮಾರ್ ರವರ ಸ್ಮರಣಾರ್ಥ ದಿ. ಪಟ್ಟೆಗುತ್ತು ಶಾಂತಕುಮಾರ್ ಆರಿಗ ಅಂಕಣದಲ್ಲಿ ‘ಸಮನ್ವಯ ಟ್ರೋಫಿ-season-2 ಫೆ.18 ರಂದು ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಬಿಡುಗಡೆ ಫೆ.6 ರಂದು ನಡೆಯಿತು.
ಶ್ರೀ ಧೂಮಾವತಿ ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಫೆ.18 ರಂದು ಜುಮಾದಿಪಲ್ಕೆ, ಪಡ್ನೂರಿನಲ್ಲಿ 58 ಕೆ.ಜಿ. ವಿಭಾಗದ ಪುರುಷರ ಹೊನಲು ಬೆಳಕಿನ ಪ್ರೊ ಮಾದರಿಯ ಮ್ಯಾಟ್ ಕಬಡ್ಡಿ ಪಂದ್ಯಾಟ ಹಾಗೂ 7+1 ಜನರ 510 ಕೆ.ಜಿ. ವಿಭಾಗದ ಹಗ್ಗಜಗ್ಗಾಟ ನಡೆಯಲಿದೆ.