ಕಡಬ: ಶ್ರೀ ಧರ್ಮರಸು ಉಳ್ಳಾಕುಲು ಪಿಲಿಚಾಮುಂಡಿ ಮತ್ತು ವರ್ಣರಪಂಜುರ್ಲಿ ದೈವಸ್ಥಾನ ಕುದ್ರೋಳಿಮಾಡ ಪುಣ್ಚಪ್ಪಾಡಿ ದೈವಜ್ಞರುಗಳಾದ ಜಯಚಂದ್ರ ಮತ್ತು ಲಕ್ಷ್ಮೀನಾರಾಯಣ ಕಾಸರಗೋಡು ಮತ್ತು ವಾಸ್ತುಶಿಲ್ಪಿ ಪ್ರಸಾದ ಮುನಿಯಂಗಳ ರವರ ಮಾರ್ಗದರ್ಶನದಂತೆ ಪುನರ್ ನಿರ್ಮಾಣಗೊಂಡಿದ್ದು, ದೈವಸ್ಥಾನದ ಪುನರ್ ನಿರ್ಮಾಣ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಫೆ.21 ರಿಂದ 23ರ ವರೆಗೆ ವೇದಮೂರ್ತಿ ಕೆಮ್ಮಿಂಜೆ ಶ್ರೀ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಕಡಬ ತಾಲೂಕು ಪುಣ್ಚಪ್ಪಾಡಿ ಗ್ರಾಮದ ಪುಣ್ಚಪ್ಪಾಡಿ ತಳಮನೆ ಮತ್ತು ತೋಟದಡ್ಕ ಮನೆತನದ ಹಾಗೂ ಊರಿನವರ ಪ್ರಧಾನ ಆರಾಧ್ಯ ಕಾರಣಿಕ ದೈವಗಳಾದ ಶ್ರೀ ಧರ್ಮರಸು ಉಳ್ಳಾಕುಲು ಪಿಲಿಚಾಮುಂಡಿ ಮತ್ತು ವರ್ಣರಪಂಜುರ್ಲಿ ದೈವಸ್ಥಾನ ಕುದ್ರೋಳಿಮಾಡ ಫೆ.22 ರಂದು ಮೀನಲಗ್ನದ ಶುಭ ಮುಹೂರ್ತದಲ್ಲಿ ಪುನರ್ ನಿರ್ಮಾಣ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ.
ಫೆ.21 ರಂದು ಬೆಳಿಗ್ಗೆ ಸವಣೂರು ಪದ್ಮಾವತಿ ದೇವಿ ಬಸದಿ ಬಳಿಯಿಂದ ಹಾಗೂ ಕುಮಾರಮಂಗಲ ಶ್ರೀ ಗಣೇಶ್ ನಿಡ್ವಣ್ಣಾಯರವರ ಮನೆಯಿಂದ ಹೊರಕಾಣಿಕೆ ಮೆರವಣಿಗೆ ಹೊರಡಲಿದೆ.
ಸಂಜೆ ಕ್ಷೇತ್ರ ತಂತ್ರಿಗಳ ಹಾಗೂ ಋತ್ವಿಜರ ಆಗಮನ ಮತ್ತು ಪೂರ್ಣಕುಂಭ ಸ್ವಾಗತ ನಡೆಯಲಿದೆ. ದೇವತಾ ಪ್ರಾರ್ಥನೆ ಆಚಾರ್ಯವರಣ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಕ್ಷೋಗ್ನ ಹೋಮ, ವಾಸ್ತುಹೋಮ, ವಾಸ್ತು ಪೂಜಾ ಬಲಿ, ನೂತನ ಬಿಂಬ ಜಲಾಧಿವಾಸ, ಪ್ರಕಾರ ಬಲಿ, ಪ್ರಸಾದ ವಿತರಣೆ ನಡೆಯಲಿದೆ.
ಫೆ.22 ರಂದು ಬೆಳಿಗ್ಗೆ ಮೀನಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ಧರ್ಮರಸು ಉಳ್ಳಾಕುಲು ಪಿಲಿಚಾಮುಂಡಿ ಮತ್ತು ವರ್ಣರಪಂಜುರ್ಲಿ ದೈವಗಳ ಪ್ರತಿಷ್ಠೆ ಕಲಶಾಭಿಷೇಕ, ತಂಬಿಲ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಭಜನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಜೆ ಪುಣ್ಚಪ್ಪಾಡಿ ತಳಮನೆಯಿಂದ ಶ್ರೀ ಧರ್ಮರಸು ಉಳ್ಳಾಕುಲು, ಪಿಲಿಚಾಮುಂಡಿ, ವರ್ಣರಪಂಜುರ್ಲಿ ದೈವಗಳ ಭಂಡಾರ ಕುದ್ರೋಳಿಮಾಡ ಸಾನಿಧ್ಯಕ್ಕೆ ಆಗಮಿಸಲಿದೆ.
ಫೆ.23 ರಂದು ಬೆಳಿಗ್ಗೆ ಶ್ರೀ ಧರ್ಮರಸು ಉಳ್ಳಾಕುಲು ನೇಮೋತ್ಸವ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ ಪಿಲಿಚಾಮುಂಡಿ ನೇಮೋತ್ಸವ ಹಾಗೂ ಸಂಜೆ ವರ್ಣರ ಪಂಜುರ್ಲಿ ನೇಮೋತ್ಸವ ನಡೆಯಲಿದೆ.
ಸಾಂಸ್ಕೃತಿಕ ಮತ್ತು ಸಭಾಕಾರ್ಯಕ್ರಮ :
ಫೆ.22 ರಂದು ಬೆಳಿಗ್ಗೆ ಶ್ರೀಹರಿ ಭಜನಾ ಮಂಡಳಿ ದೇವಸ್ಯ, ಕೃಷ್ಣಾರ್ಪಿತ ಭಜನಾ ಮಂಡಳಿ ಪುಣ್ಚಪ್ಪಾಡಿ ಹಾಗೂ ಶ್ರೀ ಮಹಾವಿಷ್ಣು ಭಜನಾ ಮಂಡಳಿ ಮುಗೇರು, ಸವಣೂರು ರವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ಅಂಗನವಾಡಿ ಕೇಂದ್ರ ಪುಣ್ಚಪ್ಪಾಡಿ ಮತ್ತು ಕುಮಾರಮಂಗಲ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಪುಣ್ಚಪ್ಪಾಡಿ ಮತ್ತು ಕುಮಾರಮಂಗಲ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ರವರು ಆಶೀರ್ವಚನ ನೀಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿವರಾದ ಎಸ್. ಅಂಗಾರ ರವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೀವಿ ವಿ. ಶೆಟ್ಟಿ, ಕಡಬ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು ಯೋಜನಾಧಿಕಾರಿಗಳಾದ ಮೇದಪ್ಪ ಗೌಡ, ಸ್ಥಳ ದಾನಿಗಳಾದ ದಯಾನಂದ ನಾಯಕ್ ಬೆಂಗಳೂರು ರವರು ಆಗಮಿಸಲಿದ್ದಾರೆ.
ಸಂಜೆ 6 ರಿಂದ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಬಪ್ಪನಾಡು ರವರಿಂದ ಯಕ್ಷಗಾನ ಬಯಲಾಟ ‘ಭಂಡಾರ ಚಾವಡಿ’ ಮೂಡಿಬರಲಿದೆ..