ವಸಂತ ಮಾಸದಲ್ಲಿ ನಡೆಯುವ ವರ್ಷಾವಧಿ ಮುಳಿಯ ಮೆಚ್ಚಿ ನೇಮೋತ್ಸವ ರಾಮಚಂದ್ರ ಭಟ್ ಮುಳಿಯ ಅವರ ಮನೆಯ ದೈವಸ್ಥಾನದಲ್ಲಿ ನಡೆಯಿತು. ಕೋವಿಡ್ ನಿಯಮಾಮವಳಿಯ ಅನ್ವಯದಂತೆ ನಡೆದ ಈ ಮೆಚ್ಚಿ ನೇಮೋತ್ಸವದಲ್ಲಿ ಧರ್ಮದೈವ ಧೂಮಾವತಿ ಮತ್ತು ಬಂಟ ದೈವದ ನೇಮೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಬಂಟ ದೈವದ ಪಾತ್ರಿಯಾಗಿ ನರ್ತಿಸಿದ 8 ವರ್ಷದ ಬಾಲಕ ಜೀವಿತ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾನೆ. ಪ್ರಸ್ತುತ ಜೀವಿತ್ ಎರಡನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು.. ಪೆರುವಾಯಿ ನಿರ್ಮಲಾ ಮತ್ತು ಸೇಸಪ್ಪ ದಂಪತಿಗಳ ಪುತ್ರನಾಗಿದ್ದು ಎಳೆ ವಯಸ್ಸಿನಲ್ಲಿಯೇ ತನ್ನನ್ನು ದೈವಾರಾಧನೆಯಲ್ಲಿ ತೊಡಗಿಸಿಕೊಂಡು ಎಲ್ಲರ ಕಣ್ಮನ ಸೆಳೆದಿದ್ದಾನೆ.