ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿ ಶಾಫಿ ಬೆಳ್ಳಾರೆಗೆ ಎಸ್.ಡಿ.ಪಿ.ಐ ಟಿಕೆಟ್ ಘೋಷಣೆ ಮಾಡಿದೆ. ಚುನಾವಣೆ ಹೊತ್ತಲ್ಲಿ ಎಸ್‌ಡಿಪಿಐನ ಈ ವಿವಾದಾತ್ಮಕ ನಡೆ ಭಾರೀ ಚರ್ಚೆಗೆ ಕಾರಣವಾಗಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಶಾಫಿ ಬೆಳ್ಳಾರೆಗೆ ಟಿಕೆಟ್ ನಿಡೋದಾಗಿ ಎಸ್‌ಡಿಪಿಐ ಕಾರ್ಯಕರ್ತರ ಸಮಾವೇಶದಲ್ಲಿ ಘೋಷಣೆ ಮಾಡಲಾಗಿದೆ.
ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಖಾನ್ ಈ ಘೋಷಣೆ ಮಾಡಿದ್ದಾರೆ.
ಶಾಫಿ ಬೆಳ್ಳಾರೆ ಎಸ್‌ಡಿಪಿಐನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಶಾಫಿ ಬೆಳ್ಳಾರೆಯನ್ನು ಎನ್.ಐ.ಎ ಅಧಿಕಾರಿಗಳು ಬಂಧಿಸಿದ್ದಾರೆ.
ಜೈಲಿನಿಂದಲೇ ಶಾಫಿ ಬೆಳ್ಳಾರೆ ಸ್ಪರ್ಧೆ ಮಾಡಲಿದ್ದಾನೆ ಎನ್ನಲಾಗುತ್ತಿದೆ. ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಶಾಫಿ ಬೆಳ್ಳಾರೆ ವಿರುದ್ಧ ನೇರ ಆರೋಪಗಳಿವೆ. ತನಿಖೆ ವೇಳೆ ಸಿಕ್ಕಿರುವ ಸೂಕ್ತ ಸಾಕ್ಷ್ಯಾಧಾರಗಳನ್ನು ಇಟ್ಟುಕೊಂಡು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಶಾಫಿ ಬೆಳ್ಳಾರೆ ಅನ್ನೋ ಆರೋಪಿ ಜೈಲಲ್ಲಿ ಇದ್ದಾನೆ. ಹಿಂದೂ ನಾಯಕನನ್ನ ಕೊಂದವನಿಗೆ ಎಸ್‌ಡಿಪಿಐ ಟಿಕೆಟ್ ಘೋಷಣೆ ಮಾಡಿದೆ. ಕೊಲೆ ಮಾಡುವ ಉದ್ದೇಶದಿಂದಲೇ ಈ ಘೋಷಣೆ ಮಾಡಿದ್ದಾರೆ. ಎಲೆಕ್ಷನ್ ಕಮಿಷನ್ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು.
ಕೊಲೆ ಆರೋಪಿಯನ್ನ ಎಲೆಕ್ಷನ್‌ಗೆ ನಿಲ್ಲಲು ಅನರ್ಹ ಮಾಡಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ..