ಪುತ್ತೂರು: ಮೂಕ ಪ್ರಾಣಿಗಳಿಗೆ ಆಹಾರವನ್ನು ನೀಡಿ ಅವುಗಳನ್ನು ಪ್ರೀತಿಯಿಂದ ಸಾಕುತ್ತಿರುವ ಪುತ್ತೂರಿನ ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು ರವರನ್ನು ‘ಆಶೀರ್ವಾದ ಜ್ಯುವೆಲ್ಲರ್ಸ್’ ನ ಮಾಲಕ ಮಾಧವ್ ಶೇಟ್ ರವರು ಗೌರವಿಸಿದರು.

ರಾಜೇಶ್ ಬನ್ನೂರು ರವರಿಗೆ ಶಾಲು ಹೊದಿಸಿ, ಪೇಟ ತೊಡಿಸಿ, ಬೆಳ್ಳಿಯ ಮಹಾಲಿಂಗೇಶ್ವರ ಫೋಟೋ ಮತ್ತು ಗೌರವಧನವನ್ನು ನೀಡಿ ಮಾಧವ್ ಶೇಟ್ ರವರು ಸನ್ಮಾನಿಸಿದರು.

ರಾಜೇಶ್ ಬನ್ನೂರು ರವರು ಪ್ರತಿನಿತ್ಯ ಮೂಕ ಪ್ರಾಣಿಗಳಿಗೆ ಆಹಾರವನ್ನು ನೀಡಿ ಅವುಗಳನ್ನು ಪ್ರೀತಿಯಿಂದ ನೋಡಿಕೊಳ್ಳುವ ಮಾನವೀಯತೆ ಕಾರ್ಯವನ್ನು ಮಾಡುತ್ತಿದ್ದಾರೆ..


