ಪುತ್ತೂರು: ಪಾಣಾಜೆ ಗ್ರಾಮದ ದೇವಸ್ಯ ಶಂಭು ಬಲ್ಯಾಯರು (ವ. ) ಏ. 21 ರಂದು ಸಂಜೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.ಸುಮಾರು 40 ವರ್ಷಗಳಿಂದ ಆರ್ಲಪದವುನಲ್ಲಿ ಟೈಲರ್ ವೃತ್ತಿ ಮಾಡಿಕೊಂಡು ಟೈಲರ್ ಶಂಭಣ್ಣ ಎಂದೇ ಚಿರಪರಿಚಿತರಾಗಿದ್ದ ಇವರು ಸ್ನೇಹಪರ ಮತ್ತು ಸಜ್ಜನಿಕೆಯ ಸ್ವಭಾವದಿಂದ ಎಲ್ಲರೊಡನೆ ಬೆರೆತು ಆತ್ಮೀಯರಾಗಿದ್ದರು.ಮೃತರು ಪತ್ನಿ ವಿಜಯ, ಪುತ್ರರಾದ ವರದರಾಜ್, ವರುಣ್‌ರಾಜ್ ಮತ್ತು ಪುತ್ರಿ ವಜ್ರೇಶ್ವರಿ, ಸಹೋದರರಾದ ನಾರಾಯಣ ಬಲ್ಯಾಯ, ಆನಂದ ಬಲ್ಯಾಯ, ವಾಸುದೇವ ಬಲ್ಯಾಯ, ಉಪೇಂದ್ರ ಬಲ್ಯಾಯರವರನ್ನು ಅಗಲಿದ್ದಾರೆ.