ವಿಟ್ಲ: ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಸಮೀಪದ ಕನ್ಯಾನ ಶಿರಂಕಲ್ಲು ಎಂಬಲ್ಲಿ ನಡೆದಿದೆ.
ಮೃತರನ್ನು ಪ್ರಮೋದ್ (31) ಎಂದು ಗುರುತಿಸಲಾಗಿದೆ.
ಪ್ರಮೋದ್ ರವರು ಸುಮಾರು 6 ತಿಂಗಳುಗಳಿಂದ ಯಾರಲ್ಲೂ ಮಾತನಾಡದೇ ಸರಿಯಾಗಿ ಊಟ ಮಾಡದೇ ರಾತ್ರಿ ನಿದ್ದೆಯು ಮಾಡದೇ ಮನೆಯಲ್ಲಿ ಯಾವಾಗಲೂ ಏನೋ ಯೋಚನೆ ಮಾಡುತ್ತಾ ಒಂಟಿಯಾಗಿ ಕುಳಿತು ಮಾನಸಿಕ ರೀತಿಯಲ್ಲಿ ವರ್ತನೆ ಮಾಡುತ್ತಿದ್ದು, ಪ್ರಮೋದ್ ನನ್ನು ಚಿಕಿತ್ಸೆಯ ಬಗ್ಗೆ ಹಲವು ಬಾರಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಕೊಡಿಸಿ, ಮನೆಯಲ್ಲಿ ಮದ್ದು ಮಾಡಿದರೂ ಕೂಡ ಗುಣಮುಖವಾಗದ ಕಾರಣ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಸಾಯುವ ಉದ್ದೇಶದಿಂದ ಫೆ.21 ರಂದು ಮನೆಯ ನಡುಕೋಣೆಯಲ್ಲಿರುವ ಮರದ ಅಡ್ಡಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆ ಯು.ಡಿ ಆರ್ ನಂಬ್ರ : 09/2023 ಕಲಂ: 174 ಸಿ ಆರ್ ಪಿಸಿ ರಂತೆ ಪ್ರಕರಣ ದಾಖಲಾಗಿದೆ.