ಪುತ್ತೂರು: ತಾಲೂಕಿನ ನರಿಮೊಗರು ಗ್ರಾಮದ ಧರ್ಮನಗರ ನಿವಾಸಿ ಗುರುವಪ್ಪ ಮತ್ತು ಜಾನಕಿಯವರಿಗೆ ಮೂವರು ಗಂಡು ಮಕ್ಕಳಿದ್ದು, ಮೊದಲನೆಯವರಾದ ಸುರೇಶ್ (30) 5 ವರ್ಷದಿಂದ ಗ್ಲೋಬಲ್ ಲಿಪ್ಟ್ ಸರ್ವಿಸ್ ಕಂಪೆನಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದು, ಇವರು ಫೆ.19 ರಂದು ಹೃದಯಘಾತದಿಂದ ಮರಣ ಹೊಂದಿದ್ದು, ಅವರಿಗೆ ಮದುವೆಯಾಗಿ 2 ತಿಂಗಳಷ್ಟೇ ಆಗಿದ್ದು, ಅವರ ಮನೆಗೆ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸಹಾಯಧನ ನೀಡಿದರು.
ಈ ವೇಳೆ ಪುರುಷರಕಟ್ಟೆ ಕಾಂಗ್ರೆಸ್ ಬೂತ್ ಅಧ್ಯಕ್ಷ ರವೀಂದ್ರ, ಸ್ಥಳೀಯ ನಿವಾಸಿ ಯೋಗಿಶ್ ಮತ್ತು ಇತರರು ಉಪಸ್ಥಿತರಿದ್ದರು.