ಪುತ್ತೂರು: ನಿವೃತ್ತ ಪೊಲೀಸ್ ಅಧಿಕಾರಿ ಮಂಜಲ್ಪಡ್ಪು ನಿವಾಸಿ ಮೋನಪ್ಪ ಗೌಡ (74) ರವರು ಅನಾರೋಗ್ಯದಿಂದಾಗಿ ನಿಧನರಾದರು.

ಮೋನಪ್ಪ ಗೌಡ ರವರು ಎಎಸ್ಐ ಆಗಿ ಹಿರಿಯಡ್ಕ, ಮಂಗಳೂರು ಟ್ರಾಫಿಕ್ ಈಸ್ಟ್, ಕಂಕನಾಡಿ, ಕಡಬ ಮತ್ತು ವಿಟ್ಲ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.
ಮೃತರು ಪತ್ನಿ, ಪುತ್ರಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ..