ವಿಟ್ಲ: ಕುದ್ದುಪದವು ಎಂಬಲ್ಲಿ ಮನೆಯ ಬಾಗಿಲು ಒಡೆದು ಒಳಗೆ ಪ್ರವೇಶಿಸಿ ಸುಮಾರು 1,11,000 ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವುಗೈದಿರುವ ಘಟನೆ ನಡೆದಿದೆ.

ಝಬೈದಾ ಮತ್ತು ಅವರ ಪತಿ ಶರೀಪ್ ಕೆ.ಪಿ ವಾಸವಿದ್ದ ಮನೆಗೆ ನುಗ್ಗಿದ ಕಳ್ಳರು ಮನೆಯ ಆರ್‌ಸಿಸಿ ಮೇಲೆ ಹೋಗಲು ಇರುವ ಬಾಗಿಲನ್ನು ಆಯುಧದಿಂದ ಮೀಟಿ ಒಳಗೆ ಪ್ರವೇಶಿಸಿ ಮಲಗುವ
ಕೋಣೆಯಲ್ಲಿದ್ದ ಗಾಡ್ರೇಜ್ ಮುರಿದು ಅದರಲ್ಲಿದ್ದ 08 ಗ್ರಾಂ ತೂಕದ ಮಗುವಿನ ಕೈ ಚೈನ್-01, ಸುಮಾರು ತಲಾ 8 ಗ್ರಾಂ ತೂಕದ ಮಗುವಿನ ಕಾಲು ಚೈನ್-2, ಸುಮಾರು 12 ಗ್ರಾಂ ತೂಕದ ಕುತ್ತಿಗೆಯ ಸರ-1, ಸುಮಾರು 12 ಗ್ರಾಂ ತೂಕದ ಕೈ ಬಳೆ-1 ಹಾಗೂ ಗಾಡ್ರೇಜ್ ನಲ್ಲಿದ್ದ 15000 ನಗದು ಕಳ್ಳತನವಾಗಿದ್ದು, ಒಟ್ಟು ಚಿನ್ನಾಭರಣಗಳು 48 ಗ್ರಾಂ ಆಗಿದ್ದು, ಅಂದಾಜು ಮೌಲ್ಯ ರೂಪಾಯಿ 96000
ಆಗಬಹುದು. ಕಳ್ಳತನವಾಗಿರುವ ಚಿನ್ನಾಭರಣಗಳ ಮತ್ತು ನಗದು ಹಣದ ಒಟ್ಟು ಅಂದಾಜು ಮೌಲ್ಯ 1,11,000/-ರೂ ಆಗಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಳ್ಳತನ ಮಾಡಿ ಮನೆಯ ಅಡುಗೆ ಕೋಣೆಯ ಬಾಗಿಲಿನಿಂದ ಹೊರಟು ಹೋಗಿದ್ದು, ಕಳ್ಳರನ್ನು ಪತ್ತೆ ಮಾಡಿಕೊಡುವಂತೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ದೂರು ದಾಖಲಾಗಿದೆ.
ಅದೇ ರೀತಿ ಮರಕ್ಕಿನಿ ಅಡ್ಯನಡ್ಕ ಭಾಗದ ಜಮೀಳಾ ಹಸೈನಾರ್, ಎಸ್ ಮೊಹಮ್ಮದ್, ಅರಫಾತ್, ಅನ್ವರ್ ಎಂಬವರ ಮನೆಯಲ್ಲಿಯೂ ಕಳ್ಳತನ ನಡೆದಿದೆ.