ಉಪ್ಪಿನಂಗಡಿ: ಶ್ರೀ ಮಾಧವ ಶಿಶು ಮಂದಿರದ ಆಶ್ರಯದಲ್ಲಿ ಫೆ.26 ರಂದು ನಡೆಯುವ ಪವಿತ್ರ ಗಂಗಾಪೂಜಾ ಕಾರ್ಯಕ್ರಮದಲ್ಲಿ ನೆರವೇರಿಸಲು ಉದ್ದೇಶಿಸಿರುವ ಗಂಗಾರತಿಗೆ ಬಳಸುವ 12 ಇಂಚು ಎತ್ತರದ ಎರಡುವರೆ ಕೆ.ಜಿ ತೂಕದ ಒಂದು ರಥಾರತಿಯನ್ನು ಉಪ್ಪಿನಂಗಡಿಯ ಶ್ರೀ ಲಕ್ಷ್ಮೀ ಸ್ಟೋರ್ಸ್ ಮಾಲಕರಾದ ಕರಾಯ ಗಣೇಶ್ ನಾಯಕ್ ರವರು ಶಿವರಾತ್ರಿಯ ದಿನದಂದು ಶ್ರೀ ಮಾಧವ ಶಿಶು ಮಂದಿರ ಸಮಿತಿಗೆ ಹಸ್ತಾಂತರಿಸಿದರು.
ಒಟ್ಟು 7 ರಥಾರತಿಯ ಅವಶ್ಯಕತೆ ಇದ್ದು ಉಳಿದ 6 ರಥಾರತಿಗಳಿಗೆ ಸಹೃದಯಿ ಬಂಧುಗಳು ಸಹಕಾರ ನೀಡುವಂತೆ ಶ್ರೀ ಮಾಧವ ಶಿಶು ಮಂದಿರ ಸಮಿತಿಯವರು ತಿಳಿಸಿದ್ದಾರೆ.