ಮಂಗಳೂರು : ಕೋವಿಡ್ ಎರಡನೇ ಅಲೆಯ ಪರಿಣಾಮವಾಗಿ ಮೇ 1ರ ನಂತರ 18ವರ್ಷದ ಮೇಲಿನ ಯುವಕರಿಗೆ ಕೋವಿಡ್ ಲಸಿಕೆ ತೆಗೆದುಕೊಳ್ಳಲು ಸರಕಾರ ಆದೇಶ ಮಾಡಿರುವುದರಿಂದ ಎಲ್ಲರೂ ಕಡ್ಡಾಯವಾಗಿ ಲಸಿಕೆ ತೆಗೆದುಕೊಳ್ಳಬೇಕು ಹಾಗೂ ಲಸಿಕೆ ಪಡೆದ ನಂತರ 60 ದಿವಸದ ವರೆಗೆ ರಕ್ತದಾನ ಮಾಡುವ ಹಾಗಿಲ್ಲ, ಎಲ್ಲರೂ ಕಡ್ಡಾಯವಾಗಿ ಲಸಿಕೆ ತೆಗಯಬೇಕಾದ ಅನಿವಾರ್ಯ ಇರುವುದರಿಂದ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದ ಅಭಾವ ಬಹಳವಾಗಿ ಕಾಡುವ ಸಂಭವವಿದೆ.
ಎಲ್ಲಾ ಯುವಕರು ಮೇ 1ರ ಒಳಗಡೆ ರಕ್ತದಾನ ಮಾಡಲು ಮುಂದಾಗಬೇಕು ಹಾಗೂ ತಮ್ಮ ಪರಿಚಯದ ಗೆಳೆಯರಿಗೆ ರಕ್ತದಾನ ಮಾಡಲು ಪ್ರೇರೇಪಿಸಿ ರಕ್ತದಾನವನ್ನು ಮಾಡಿಸಿ ಮುಂದಿನ ಎರಡು ತಿಂಗಳಿಗೆ ಎಲ್ಲಾ ಬ್ಲಡ್ ಬ್ಯಾಂಕ್ ನಲ್ಲಿ ರೋಗಿಗಳಿಗೆ ರಕ್ತದ ಕೊರತೆ ಆಗದ ರೀತಿಯಲ್ಲಿ ಮಾಡುವ ಉದ್ದೇಶದಿಂದ ಎಲ್ಲರೂ ರಕ್ತದಾನ ಮಾಡಲು ಮುಂದೆ ಬಂದು ರಕ್ತದಾನ ಮಾಡಿ ಸಹಕರಿಸಬೇಕಾಗಿ ಬ್ಲಡ್ ಡೊನರ್ಸ್ ಮಂಗಳೂರು(ರಿ) ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.