ಕೋವಿಡ್ ಎರಡನೇ ಅಲೆ ಭೀತಿ ಹಿನ್ನಲೆಯಲ್ಲಿ ಪುತ್ತೂರು ತಾಲೂಕಿನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮೇ 4 ಬೆಳಿಗ್ಗೆ 6 ಗಂಟೆಯವರೆಗೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಕ್ಷೇತ್ರದ ಸಂಪ್ರದಾಯದಂತೆ ನಿತ್ಯ ಪೂಜಾ ವಿಧಿ ವಿಧಾನ ಗಳು ಮಾತ್ರ ನಡೆಯಲಿದೆ. ಭಕ್ತರಿಗೆ ಯಾವುದೇ ಸೇವೆಗಳು ಲಭ್ಯವಿರುವುದಿಲ್ಲ ಹಾಗೂ ನಿತ್ಯ ಜರಗುವ ಅನ್ನಸಂತರ್ಪಣೆ ಯನ್ನು ಕೋವಿಡ್ ವಿಷಮ ಪರಿಸ್ಥಿತಿಯಿಂದ ತಡೆಹಿಡಿಯಲಾಗಿದ್ದು ಭಕ್ತರು ಸಹಕರಿಸ ಬೇಕಾಗಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.