ಪುತ್ತೂರು: ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಲಕ್ಹ್ಮೀ ದೇವಿ ಬೆಟ್ಟದಲ್ಲಿ ಮಾ.14 ರಂದು ಮೀನ ಸಂಕ್ರಮಣದ ದಿನ ಬೆಳಿಗ್ಗೆ ಬೆಟ್ಟದ ದೇವಿಗೆ ಸೂರ್ಯನ ಕಿರಣಗಳು ಸ್ಪರ್ಶವಾಗುವ ಹಿನ್ನೆಲೆ ವಿಶೇಷ ಪೂಜೆ ನಡೆಯಲಿದೆ.
ಬೆಳಿಗ್ಗೆ 6.30 ರಿಂದ 7ರ ವರೆಗೆ ಶ್ರೀ ಮಹಾಲಿಂಗೇಶ್ವರ ಭಜಕ ವೃಂದದವರಿಂದ ಭಜನೆ ನಡೆಯಲಿದೆ.
7ರ ರಿಂದ ಶ್ರೀಕೃಷ್ಣ ಉಪಾಧ್ಯಾಯ ರವರಿಂದ ವೇದ ಘೋಷ ನಡೆಯಲಿದೆ. 7.30 ರಿಂದ ವಿಶೇಷ ಪೂಜೆ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಐತ್ತಪ್ಪ ಸಪಲ್ಯ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























