ವಿಟ್ಲ: ವಿದೇಶಕ್ಕೆ ತೆರಳುವ ಮಗಳನ್ನು ಏರ್‌ಪೋರ್ಟ್‌ಗೆ ಬಿಡಲು ಹೋಗಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ನಗದನ್ನು ದೋಚಿ ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಬೊಣ್ಯಕುಕ್ಕು ಎಂಬಲ್ಲಿ ನಡೆದಿದೆ.

ವೀರಕಂಭ ಗ್ರಾಮದ ಬೊಣ್ಯಕುಕ್ಕು ಜನತಾ ಕಾಲೋನಿ ನಿವಾಸಿ ಮಹಮ್ಮದ್ ಮುಸ್ಲಿಯಾರ್ ರವರು ಕುಟುಂಬ ಸಮೇತರಾಗಿ ಮಾ.27 ರಂದು ರಾತ್ರಿ ವಿದೇಶಕ್ಕೆ ತೆರಳಲಿದ್ದ ಮಗಳನ್ನು ಮಂಗಳೂರು ಏರ್‌ಪೋರ್ಟ್‌ಗೆ ಬಿಟ್ಟು ಬರಲು ತೆರಳಿದ್ದರು. ಅವರು ಮರಳಿ ಬಂದು ನೋಡಿದಾಗ ಮನೆಯ ಬಾಗಿಲು ತೆರೆದಿತ್ತಲ್ಲದೇ ಮನೆಯ ಛಾವಣಿಗೆ ಏಣಿ ಇಟ್ಟು ಮನೆಯೊಳಗೆ ನುಗ್ಗಿ ಕಪಾಟಿನ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ.
ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.