Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ನೆಲ್ಯಾಡಿ: ಖಾಸಗಿ ಬಸ್ ಹಿಟಾಚಿ ಲಾರಿಗೆ ಡಿಕ್ಕಿ : ಓರ್ವ ಸಾವು ಹಲವರಿಗೆ ಗಾಯ..!!

    ನೆಲ್ಯಾಡಿ: ಖಾಸಗಿ ಬಸ್ ಹಿಟಾಚಿ ಲಾರಿಗೆ ಡಿಕ್ಕಿ : ಓರ್ವ ಸಾವು ಹಲವರಿಗೆ ಗಾಯ..!!

    ಪುತ್ತೂರು : ಚಿಕ್ಕ ಪುತ್ತೂರು ನಿವಾಸಿ ಗರ್ಭಿಣಿ ರೇಷ್ಮಾ ಆತ್ಮಹತ್ಯೆ..!!

    ಪುತ್ತೂರು : ಚಿಕ್ಕ ಪುತ್ತೂರು ನಿವಾಸಿ ಗರ್ಭಿಣಿ ರೇಷ್ಮಾ ಆತ್ಮಹತ್ಯೆ..!!

    (ಜೂ.16) :ದ. ಕ ಜಿಲ್ಲೆಯ ಅಂಗವಾಡಿಯಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಘೋಷಣೆ: ಪರಿಷ್ಕೃತ ಆದೇಶ ಪ್ರಕಟಿಸಿದ ಡಿಸಿ..!!

    (ಜೂ.16) :ದ. ಕ ಜಿಲ್ಲೆಯ ಅಂಗವಾಡಿಯಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಘೋಷಣೆ: ಪರಿಷ್ಕೃತ ಆದೇಶ ಪ್ರಕಟಿಸಿದ ಡಿಸಿ..!!

    ಮಳೆಯ ಹಿನ್ನಲೆ: ದ.ಕ ಜಿಲ್ಲೆಯ 5 ಪ್ರದೇಶಗಳಿಗೆ (ಜೂ.16) ರಂದು ರಜೆ ಘೋಷಣೆ..!!

    ಮಳೆಯ ಹಿನ್ನಲೆ: ದ.ಕ ಜಿಲ್ಲೆಯ 5 ಪ್ರದೇಶಗಳಿಗೆ (ಜೂ.16) ರಂದು ರಜೆ ಘೋಷಣೆ..!!

    ವಿ.ಹಿಂ.ಪ ಕಾರ್ಯಾಲಯ ಕಟ್ಟಡಕ್ಕೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ದೇಣಿಗೆ..!!

    ವಿ.ಹಿಂ.ಪ ಕಾರ್ಯಾಲಯ ಕಟ್ಟಡಕ್ಕೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ದೇಣಿಗೆ..!!

    ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಭಾರೀ ಮಳೆ – ದತ್ತಪೀಠದಲ್ಲಿ ಕಾರು ಪಲ್ಟಿ, ತಪ್ಪಿದ ಭಾರೀ ಅನಾಹುತ..!!

    ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಭಾರೀ ಮಳೆ – ದತ್ತಪೀಠದಲ್ಲಿ ಕಾರು ಪಲ್ಟಿ, ತಪ್ಪಿದ ಭಾರೀ ಅನಾಹುತ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಬಂಟ್ವಾಳ

ವಿಟ್ಲ : ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ವಿಚಾರವಾಗಿ ಸ್ಪಷ್ಟನೆ ನೀಡಿದ ರಾಜೇಶ್ ಬಾಳೆಕಲ್ಲು ; ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ಮುಖಂಡರ ಮೇಲೆ ನೇರ ಸವಾಲು

April 27, 2021
in ಬಂಟ್ವಾಳ
0
ಕಾಂಗ್ರೆಸ್ ಮುಖಂಡ ರಾಜೇಶ್ ಬಾಳೆಕಲ್ಲು ಪಕ್ಷದಿಂದ ಉಚ್ಚಾಟನೆ
Share on WhatsAppShare on FacebookShare on Twitter
Advertisement
Advertisement
Advertisement

ವಿಟ್ಲ : ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪದಲ್ಲಿ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲ್ಪಟ್ಟಿರುವ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಣಿಲ ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತ ಮಾಜಿ ಅಧ್ಯಕ್ಷ, ಹಾಲಿ ಉಪಾಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು ಸ್ಪಷ್ಟೀಕರಣ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪತ್ರಿಕೆಯಲ್ಲಿ ನನ್ನನ್ನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿರುವ ವಿಚಾರ ತಿಳಿಯಿತು. ನನ್ನ ಬಗ್ಗೆ ಆರೋಪಗಳಿರುವ ಬಗ್ಗೆ ನನ್ನ ವಿಚಾರಣೆಯಾಗಲಿ ಅಥವಾ ನನಗೆ ನೋಟಿಸಾಗಲೀ ಈವರೆಗೆ ನೀಡಿಲ್ಲ.

Advertisement
Advertisement
Advertisement
Advertisement
Advertisement
Advertisement
Advertisement

ಮಾತ್ರವಲ್ಲದೆ ನನ್ನನ್ನು ಉಚ್ಚಾಟಿಸಲಾಗಿರುವ ಬಗ್ಗೆ ಯಾವುದೇ ನೋಟೀಸು ನನಗೆ ಬಂದಿಲ್ಲ. ನಾನು ಕಳೆದ 19ನೇ ತಾರೀಕಿನಂದು ನನ್ನ ರಾಜಿನಾಮೆ ಪತ್ರವನ್ನು ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ರವರಿಗೆ ರವಾನೆ ಮಾಡಿದ್ದೇನೆ. ಓರ್ವ ಕಾರ್ಯಕರ್ತ ರಾಜಿನಾಮೆ ಕೊಟ್ಟ ಬಳಿಕ ಆತನನ್ನು ಉಚ್ಚಾಟನೆ ಮಾಡುವ ಪ್ರಮೇಯವೇ ಬರುವುದಿಲ್ಲ. ನನ್ನ ಸ್ವಾಭೀಮಾನಕ್ಕೆ ಧಕ್ಕೆಯಾಗಿರುವ ಹಿನ್ನೆಲೆಯಲ್ಲಿ ನಾನು ರಾಜಿನಾಮೆ ನೀಡಿ ಪಕ್ಷದಿಂದ ಹೊರಬಂದಿದ್ದೇನೆ.

ನಾನು ಪಕ್ಷದ ಓರ್ವ ನಿಷ್ಠಾವಂತ ಸಕ್ರೀಯ ಕಾರ್ಯಕರ್ತನಾಗಿ ಸುಮಾರು 25 ವರ್ಷಗಳ ಕಾಲ ಪಕ್ಷದ ಭಲವರ್ಧನೆಗಾಗಿ ಶ್ರಮಿಸಿದ್ದೇನೆ. ಇದೀಗ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎನ್ನುವ ವಿಚಾರ ಬೇಸರ ತಂದಿದೆ. ಪೆರುವಾಯಿ ಹಾಗೂ ಮಾಣಿಲ ಗ್ರಾಮ ಪಂಚಾಯತನ್ನು ಕಳೆದ 5 ವರ್ಷದ ಅವಧಿಯಲ್ಲಿ ನನ್ನ ನೇತೃತ್ವದಲ್ಲಿ ಅಧಿಕಾರಕ್ಕೆ ತಂದಿದ್ದೇನೆ. ಮಾಣಿಲ ಗ್ರಾಮ ಪಂಚಾಯತ್ ನ ಎರಡು ಕ್ಷೇತ್ರಗಳಲ್ಲಿ 3 ಅವಧಿಗೆ ಸ್ಪರ್ಧಿಸಿ ಗೆಲ್ಲಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ.

Advertisement
Advertisement

ಪೆರುವಾಯಿ ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷನಾಗಿ, ಉಪಾಧ್ಯಕ್ಷನಾಗಿ ಮಾಣಿಲ ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷನಾಗಿ ಪ್ರಸ್ತುತ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಈ ಭಾಗದಲ್ಲಿ ಪಕ್ಷದ ಭಲವರ್ಧನೆಗೆ ಬಹಳಷ್ಟು ಶ್ರಮಿಸಿದ್ದೇನೆ. ಇವತ್ತಿನ ಪರಿಸ್ಥಿತಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಯಾರದ್ದೋ ಕುಮ್ಮಕ್ಕಿಗೆ ಒಳಗಾಗಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ನನ್ನನ್ನು ಉಚ್ಚಾಟನೆ ಮಾಡಿದ್ದಾರೆ. ಇವರಿಗೆ ನನ್ನನ್ನು ಉಚ್ಚಾಟನೆ ಮಾಡುವ ನೈತಿಕ ಹಕ್ಕಿಲ್ಲ. ಯಾಕೆಂದರೆ ಹರೀಶ್ ಕುಮಾರ್ ರವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಬಂದಿರುವುದು ಹಿಂಭಾಗಿಲ ಮೂಲಕವಾಗಿದೆ.

ಇವರು ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ಜಿಲ್ಲೆಯಲ್ಲಿ ನೆಲಕಚ್ಚುತ್ತಾ ಹೋಗಿದೆ. ಎಂಎಲ್ ಎ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ತನ್ನ ಪಾರಪತ್ಯವನ್ನು ಕಳೆದುಕೊಳ್ಳುತ್ತಾ ಹೋಗಿದೆ ವಿನಃ, ಅಭಿವೃದ್ಧಿಯಾಗಿರುವುದು ಕಂಡುಬರುತ್ತಿಲ್ಲ. ಆದರೆ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಪೆರುವಾಯಿ ಮಾಣಿಲ ಗ್ರಾಮ ಪಂಚಾಯತ್ ಅನ್ನು ನಾನು ಯಾರಿಗೂ ಬಿಟ್ಟುಕೊಟ್ಟಿಲ್ಲ. ಇಂತಹ ಸಂದರ್ಭದಲ್ಲಿ ನನ್ನನ್ನು ಉಚ್ಚಾಟನೆ ಮಾಡಲು ಕಾರಣವೇನೆಂಬುದನ್ನು ಅಧ್ಯಕ್ಷರು ತಿಳಿಸಬೇಕಾಗಿದೆ. ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದೇನೆ ಅಥವಾ ನಾಯಕರನ್ನು ನಿಂಧಿಸಿದ್ದೇನೆ ಎಂದಾದರೆ ನನಗೆ ದಾಖಲೆ ಸಮೇತವಾಗಿ ತೋರಿಸಿ.

ಯಾವುದೇ ವಿಚಾರಣೆ ನಡೆಸದೆ, ನೋಟೀಸು ನೀಡದೆ ನನ್ನನ್ನು ಉಚ್ಚಾಟನೆ ಮಾಡಿರುವುದು ಸಮಂಜಸವಾದ ನಿರ್ಧಾರವಲ್ಲಮಾಜಿ ಶಾಸಕರಾದ ಶಕುಂತಳಾ ಟಿ. ಶೆಟ್ಟಿಯವರ ಕುಮ್ಮಕ್ಕಿನಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ ಎನ್ನುವುದು ನನಗೆ ಸ್ವತಃ ಅನುಭವವಾಗಿದೆ. ಅನೇಕ ಕಾರ್ಯಕರ್ತರನ್ನು ಶಕುಂತಳಾ ಶೆಟ್ಟಿಯವರು ತೊಂದರೆ ಮಾಡಿದ್ದಾರೆ, ಅವರನ್ನು ತುಳಿಯುವ ಕೆಲಸವನ್ನು ಮಾಡಿದ್ದಾರೆ ಎಂದು ತಿಳಿಸಿದರು.

ಬಂಟ್ವಾಳ ಭೂ ಅಭಿವೃದ್ಧಿ ನಿರ್ದೇಶಕರ ಸ್ಥಾನಕ್ಕೆ ಕೊಲ್ನಾಡು ಕ್ಷೇತ್ರದಿಂದ 2 ಬಾರಿ ಆಯ್ಕೆಯಾಗಿದ್ದೇನೆ. ಪೆರುವಾಯಿ ವ್ಯ. ಸೆ. ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಪ್ರಪ್ರಥಮ ಬ್ಯಾಂಕ್ ಚುನಾವಣೆಯಲ್ಲಿ ಆಯ್ಕೆಯಾಗಿರುತ್ತೇನೆ. ಹತ್ತು ಹಲವು ಸಂಘಟನೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಅದರಲ್ಲೂ ವಿಟ್ಲ, ಮಾಣಿಲ, ಪೆರುವಾಯಿ, ಅಳಿಕೆ,ಕೇಪು, ಪುಣಚ ಮುಂತಾದ ಕಡೆ ನನ್ನದೇ ಆದ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿಗೆ ಪಾತ್ರನಾಗಿ ಕೆಲಸ ಕಾರ್ಯಗಳನ್ನು ಅನೇಕ ವರ್ಷಗಳಿಂದ ಕಾರ್ಯ ನಿಭಾಯಿಸಿಕೊಂಡು ಬಂದಿದ್ದೇನೆ.ಆದರೆ ಕಳೆದ 4-5 ವರ್ಷಗಳಿಂದ ಈ ಕಾಂಗ್ರೆಸ್ ಮಾಜಿ ಶಾಸಕಿಯವರ ಕಿರುಕುಳದಿಂದಾಗಿ ಪಕ್ಷದಲ್ಲಿ ಬಹಳಷ್ಟು ನೊಂದಿದ್ದೇನೆ. ಕಳೆದ ಎರಡು ಬಾರಿ ನಾನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ನೇಮಕವಾಗಬೇಕಿತ್ತು. ಪಕ್ಷದ ಕಾರ್ಯಕರ್ತರ ಒಲವು ಮತ್ತು ಬೆಂಬಲ ನನಗೆ ಇತ್ತು ಆದರೆ ಮಾಜಿ ಶಾಸಕಿಯ ಸರ್ವಾಧಿಕಾರ ಮತ್ತು ದುರಂಕಾರದಿಂದ ನಾನು ಅದನ್ನು ಕಳೆದುಕೊಂಡೆ. ಅಲ್ಲದೆ ಗ್ರಾಮ ಪಂ. ಚುನಾವಣೆಯಲ್ಲಿ ನನ್ನ ವಿರುದ್ಧ ಪಿತೂರಿ ನಡೆಸಿ ಸೋಲಿಸಲು ಸತಾಯ ಗತಾಯ ಪ್ರಯತ್ನ ನಡೆಸಿದರು.

ನನ್ನನ್ನು ಉಚ್ಚಾಟಿಸಲು ನೀಡಿದ ಕಾರಣ ನೋಡಿ ಒಬ್ಬ ಜಿಲ್ಲಾ- ಕಾಂಗ್ರೆಸ್ ಅಧ್ಯಕ್ಷನಿಗೆ ಪಕ್ಷದ ನೀತಿ ನಿಯಮಗಳನ್ನು ತಿಳಿದುಕೊಳ್ಳಲು ಆಗದ ದುಃಸ್ಥಿತಿಯನ್ನು ಕಂಡಿದ್ದೇನೆ. ಗ್ರಾ. ಪಂ. ಚುನಾವಣೆಯಲ್ಲಿ ಯಾವುದೇ ಪಕ್ಷದ ಅಥವಾ ಬೆಂಬಲಿತ ಅಭ್ಯರ್ಥಿ ಎಂಬುದು ಇಲ್ಲ ಎಂಬ ಕನಿಷ್ಠ ಪರಿಜ್ಞಾನವು ಇಲ್ಲದ ಈ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷನಿಂದಾಗಿ ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಳುಗಿದಹಡಗಾಗಿದೆ. ಹರೀಶ್ ಕುಮಾರ್ ಅವರು ಜಿಲ್ಲಾ- ಕಾಂಗ್ರೆಸ್ ನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದಾಗ ಈ ಜಿಲ್ಲೆಯಲ್ಲಿ 7ಜನ ಕಾಂಗ್ರೆಸ್ ಶಾಸಕರು ಗೆದ್ದು ಬಂದಿದ್ದರು. ಆದರೆ ಇವರ ಸಂಘಟನಾ ಶ್ರಮದಿಂದ ಈಗ ಏಕೈಕ ಶಾಸಕರು ಮಾತ್ರ ಇದ್ದಾರೆ.

ಅದೇ ರೀತಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ, ಬೆಳ್ತಂಗಡಿ, ಮೂಡಬಿದಿರೆ, ಬಂಟ್ವಾಳ, ಪುತ್ತೂರು, ಉಳ್ಳಾಲ, ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಇತ್ತು ಆದರೆ ಜಿಲ್ಲಾಧ್ಯಕ್ಷರ ಪಕ್ಷ ಸಂಘಟನೆಯಿಂದ ಈಗ ಇದೆಲ್ಲಾ ಬಿ. ಜೆ.ಪಿ ಆಡಳಿತದಲ್ಲಿದೆ. ಅದೇ ರೀತಿ ಈ ಜಿಲ್ಲೆಯಲ್ಲಿ ನಡೆದ ಇತ್ತೀಚಿನ ಗ್ರಾ. ಪಂ. ಚುನಾವಣೆಯಲ್ಲಿ ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದೆ. ಸ್ವಂತ ಅಧ್ಯಕ್ಷರ ಊರಾದ ಬೆಳ್ತಂಗಡಿ ತಾಲೂಕಿನಲ್ಲಿ 48 ಗ್ರಾ. ಪಂ. ಪೈಕಿ ಕಾಂಗ್ರೆಸ್ ಕೇವಲ ೪ರಲ್ಲಿ ಆಡಳಿತದಲ್ಲಿದೆ. 12 ಗ್ರಾ. ಪಂ ನಲ್ಲಿ ಶೂನ್ಯ ಸಂಘಟನೆಯಾಗಿದೆ.

ಬೆಳ್ತಂಗಡಿಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲಾಗದ ಜಿಲ್ಲಾಧ್ಯಕ್ಷ ನನ್ನನ್ನು ಉಚ್ಚಾಟನೆ ಮಾಡುವ ನೈತಿಕತೆ ಇದೆಯೇ ಎಂಬುದು ಪ್ರಶ್ನೆ. ಪುತ್ತೂರಿನ ಮಾಜಿ ಶಾಸಕಿಯ ಕಥೆಯೇ ಬೇರೆ ಪುತ್ತೂರಿನಲ್ಲಿ ಕಾಂಗ್ರೆಸ್ ಮುಕ್ತ ಮಾಡಲು ಕಾಂಗ್ರೆಸ್ ಮಾಜಿ ಶಾಸಕಿಯೇ ಸಾಕು, ಪಕ್ಷದಿಂದ, ಪಕ್ಷಕ್ಕೆ ಹಾರುವ ಎರಡು ಬಾರಿ ಬಂಟ್ವಾಳದಲ್ಲಿ ಸೋತು ಪುತ್ತೂರಿನಲ್ಲಿ ಸುಧಾಕರ ಶೆಟ್ಟಿ ಮತ್ತು ಬೊಂಡಾಲ ಜಗನ್ನಾಥ ಶೆಟ್ಟಿಯವರ ಸೋಲಿಗೆ ಕಾರಣರಾಗಿ ಯಾರೋ ಕಟ್ಟಿದ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರಕ್ಕಾಗಿ ಬಂದು ಇಲ್ಲೂ ಸರ್ವಾಧಿಕಾರ ಮತ್ತು ದುರಂಕಾರದಿಂದ ಮೆರೆದು ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಿದ್ದು ಇದೆ ಮಾಜಿ ಶಾಸಕಿ. ನನ್ನ ವಿರುದ್ಧ ನಿರಂತರ ಪಿತೂರಿ ನಡೆಸಿ ಈ ದಿನ ನನ್ನ ವಿರುದ್ಧ ಜಿಲ್ಲಾಧ್ಯಕ್ಷರಿಗೂ ದೂರು ನೀಡಿ ನನ್ನನ್ನು ಉಚ್ಚಾಟಿಸಿದ್ದೇನೆ ಎಂದು ಸಂತೋಷಪಡುತ್ತಿರುವ ವಿಘ್ನ ಸಂತೋಷಿಯನ್ನು ನಾನು ಕಂಡಿದ್ದೇನೆ.

ನಾನು ಪಕ್ಷದಲ್ಲಿ ಪ್ರಾಮಾಣಿಕ ತೊಡಗಿಕೊಂಡು ಇರುವ ಸಂಧರ್ಭದಲ್ಲಿ ನನ್ನ ಮೇಲೆ ಈ ರೀತಿಯ ಪಿತೂರಿಗಳಿಂದ ನನ್ನ ಸ್ವಇಚ್ಛೆಯಿಂದಲೇ ನಾನು ಕಳೆದ 19/04/2021 ರಂದು ಜಿಲ್ಲಾ-ಅಧ್ಯಕ್ಷರಿಗೆ ನನ್ನ ರಾಜೀನಾಮೆಯನ್ನು ಕಳುಹಿಸಿಕೊಟ್ಟಿದ್ದೇನೆ. ಈ ರಾಜೀನಾಮೆಯನ್ನು ಕಂಡು ಆನಂತರ ದಿನಾಂಕ ಇಲ್ಲದ ನನ್ನ ಉಚ್ಚಾಟನೆಯ ಆದೇಶವನ್ನು ಹೊರಡಿಸಿದ್ದಾರೆ. ನಮ್ಮ ಪಕ್ಷಕ್ಕೆ ನಿಮ್ಮ ಉಚ್ಚಾಟನೆಯ ಮೊದಲೇ ನಾನು ದೊಡ್ಡ ಸಲಾಂ ಮಾಡಿದ್ದೇನೆ. ನಿಮ್ಮ ಮುಳುಗುವ ಹಡಗಿನಲ್ಲಿ ನನ್ನ ಪಯಣವನ್ನು ನಿಲ್ಲಿಸಿದ್ದೇನೆ. ನಿಮ್ಮ ಉಚ್ಚಾಟನೆಗೆ ದಿಕ್ಕಾರವಿರಲಿ. ಇನ್ನು ಮುಂದಿನ ದಿನಗಳಲ್ಲಿ ನನ್ನ ತಾಕತ್ತು ಮತ್ತು ನನ್ನ ಸಂಘಟನೆ ಏನು ಎಂಬುದನ್ನು ತೋರಿಸಿಕೊಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

Advertisement
Previous Post

ವಿಟಿಯು ಪರೀಕ್ಷೆಗಳು ಮುಂದೂಡಿಕೆ

Next Post

ಕೊಲ್ಲೂರು ದೇವಾಲಯದ ವ್ಯವಸ್ಥಾಪನಾ ಸಮಿತಿ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಆಯ್ಕೆ

OtherNews

(ಜೂ.16) :ದ. ಕ ಜಿಲ್ಲೆಯ ಅಂಗವಾಡಿಯಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಘೋಷಣೆ: ಪರಿಷ್ಕೃತ ಆದೇಶ ಪ್ರಕಟಿಸಿದ ಡಿಸಿ..!!
Featured

(ಜೂ.16) :ದ. ಕ ಜಿಲ್ಲೆಯ ಅಂಗವಾಡಿಯಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಘೋಷಣೆ: ಪರಿಷ್ಕೃತ ಆದೇಶ ಪ್ರಕಟಿಸಿದ ಡಿಸಿ..!!

June 16, 2025
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
Featured

ಬಂಟ್ವಾಳ: ಜೀಪ್ ನಲ್ಲಿ ತೆರಳುತ್ತಿದ್ದಾಗ ತಲವಾರ್ ಬೀಸಿದ ದುಷ್ಕರ್ಮಿಗಳು..!!!

June 14, 2025
ಬೆಳ್ತಂಗಡಿ: ಅಪ್ರಾಪ್ತ ಶಾಲಾ ಬಾಲಕಿಯ ಮೇಲೆ ಜೆಸಿಬಿ ಚಾಲಕ ಮತ್ತು ಸಂಬಂಧಿಯಿಂದ ಅತ್ಯಾಚಾರ..!! ಗರ್ಭವತಿಯಾದ ಅಪ್ರಾಪ್ತೆ, ಆರೋಪಿಗಳು ನಾಪತ್ತೆ
Featured

ಬಂಟ್ವಾಳ: ಬಸ್ಸಿನಲ್ಲಿ ಮಹಿಳೆಗೆ ಕಿರುಕುಳ: ಆರೋಪಿ ಅರೆಸ್ಟ್..!!!

June 12, 2025
ವಿಟ್ಲ: ಅಕ್ರಮ ಜುಗಾರಿ ಆಡುವ ಸ್ಥಳಕ್ಕೆ ದಾಳಿ: ಕಾನೂನು ಕ್ರಮ ಜರುಗಿಸದೆ ಹಣಕ್ಕೆ ಬೇಡಿಕೆ ಸಂಭಾಷಣೆ ವೈರಲ್: ಪಿ ಎಸ್ ಐ ಅಮಾನತು…!!!
Featured

ವಿಟ್ಲ: ಅಕ್ರಮ ಜುಗಾರಿ ಆಡುವ ಸ್ಥಳಕ್ಕೆ ದಾಳಿ: ಕಾನೂನು ಕ್ರಮ ಜರುಗಿಸದೆ ಹಣಕ್ಕೆ ಬೇಡಿಕೆ ಸಂಭಾಷಣೆ ವೈರಲ್: ಪಿ ಎಸ್ ಐ ಅಮಾನತು…!!!

June 11, 2025
ಪಡ್ಕೆತ್ತೂರು -ಮದಕ ರಸ್ತೆ ಸ್ಥಿತಿ ಶೋಚನೀಯ..!!
ಬಂಟ್ವಾಳ

ಪಡ್ಕೆತ್ತೂರು -ಮದಕ ರಸ್ತೆ ಸ್ಥಿತಿ ಶೋಚನೀಯ..!!

June 10, 2025
ವಿಟ್ಲ ಗ್ರಾಮೀಣ ಬ್ಯಾಂಕ್ ನ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ..!!
ಪುತ್ತೂರು

ವಿಟ್ಲ ಗ್ರಾಮೀಣ ಬ್ಯಾಂಕ್ ನ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ..!!

June 10, 2025

Leave a Reply Cancel reply

Your email address will not be published. Required fields are marked *

Recent News

ಯುವಕರೀರ್ವರು ನದಿಯಲ್ಲಿ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿ ಸಿನಿಮೀಯ ರೀತಿಯಲ್ಲಿ ಪಾರು.!!

ಯುವಕರೀರ್ವರು ನದಿಯಲ್ಲಿ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿ ಸಿನಿಮೀಯ ರೀತಿಯಲ್ಲಿ ಪಾರು.!!

June 16, 2025
ನೆಲ್ಯಾಡಿ: ಖಾಸಗಿ ಬಸ್ ಹಿಟಾಚಿ ಲಾರಿಗೆ ಡಿಕ್ಕಿ : ಓರ್ವ ಸಾವು ಹಲವರಿಗೆ ಗಾಯ..!!

ನೆಲ್ಯಾಡಿ: ಖಾಸಗಿ ಬಸ್ ಹಿಟಾಚಿ ಲಾರಿಗೆ ಡಿಕ್ಕಿ : ಓರ್ವ ಸಾವು ಹಲವರಿಗೆ ಗಾಯ..!!

June 16, 2025
ಪುತ್ತೂರು : ಚಿಕ್ಕ ಪುತ್ತೂರು ನಿವಾಸಿ ಗರ್ಭಿಣಿ ರೇಷ್ಮಾ ಆತ್ಮಹತ್ಯೆ..!!

ಪುತ್ತೂರು : ಚಿಕ್ಕ ಪುತ್ತೂರು ನಿವಾಸಿ ಗರ್ಭಿಣಿ ರೇಷ್ಮಾ ಆತ್ಮಹತ್ಯೆ..!!

June 16, 2025
(ಜೂ.16) :ದ. ಕ ಜಿಲ್ಲೆಯ ಅಂಗವಾಡಿಯಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಘೋಷಣೆ: ಪರಿಷ್ಕೃತ ಆದೇಶ ಪ್ರಕಟಿಸಿದ ಡಿಸಿ..!!

(ಜೂ.16) :ದ. ಕ ಜಿಲ್ಲೆಯ ಅಂಗವಾಡಿಯಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಘೋಷಣೆ: ಪರಿಷ್ಕೃತ ಆದೇಶ ಪ್ರಕಟಿಸಿದ ಡಿಸಿ..!!

June 16, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page