ಬೆಳ್ತಂಗಡಿ : ದಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಪೆಟ್ರಮೆ ವತಿಯಿಂದ ಪರಿಶಿಷ್ಟ ಪಂಗಡದ ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬನೀತಿ ಅನುಸರಿಸುವ ಬಗ್ಗೆ ಸಾಂಕೇತಿಕ ಪ್ರತಿಭಟನೆ ನಡೆಸಿ ದಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯಿಂದ ಆರೋಪಿಗಳನ್ನು ಯಾವುದೇ ಬಾಹ್ಯ ಒತ್ತಡಕ್ಕೆ ಮಣಿಯದೆ ಬಂಧಿಸಬೇಕೆಂದು ಮನವಿಯನ್ನು ನೀಡಲಾಯಿತು.
ಈ ಸಂದರ್ಭ ಆರೋಪಿಗಳನ್ನು 2 ದಿವಸದ ಒಳಗೆ ಬಂಧಿಸುವುದಾಗಿ ಧರ್ಮಸ್ಥಳ ಠಾಣಾಧಿಕಾರಿಗಳು ಭರವಸೆ ನೀಡಿದರು. ಬಂಟ್ವಾಳ ಡಿ ಎಸ್ ಪಿ ಯವರಿಗೆ ಕಛೇರಿಗೆ ತೆರಳಿ ಆರೋಪಿಗಳಿಗೆ ಸಮರ್ಪಕವಾದ ಚಾರ್ಜ್ ಶೀಟ್ ಹಾಕಲು ಒತ್ತಾಯಿಸಿ ಮನವಿಯನ್ನು ಸಲ್ಲಿಸಿದರು.