ಪುತ್ತೂರು: ಪುತ್ತೂರು ತಾಲೂಕಿನ ಜಮಾಅತ್ ಹಾಗೂ ವಿವಿಧ ಮುಸ್ಲಿಂ ಸಂಘ-ಸಂಸ್ಥೆಗಳ ಮುಖ್ಯಸ್ಥರ ಸಭೆಯು ಪುತ್ತೂರು ತಾಲೂಕು ಸೀರತ್ ಕಮಿಟಿಯ ಕಚೇರಿಯಲ್ಲಿ, ಇಂದು ನಡೆದು ಆಯ್ದ ಮಸ್ಜಿದ್ ಹಾಲ್ ಮತ್ತು ಮದರಸಗಳನ್ನು ಅಗತ್ಯವಿದ್ದಲ್ಲಿ ಕೋವಿಡ್ 19 ಚಿಕಿತ್ಸಾ ಕೇಂದ್ರಗಳನ್ನಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದೊಂದಿಗೆ ಸಂಪೂರ್ಣ ಸಹಕಾರ ನೀಡುವುದೆಂದು ತೀರ್ಮಾನಿಸಲಾಯಿತು.
ಕೋವಿಡ್ 19 ತಡೆಗಟ್ಟುವ ಲಸಿಕೆಯನ್ನು ,18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಪಡಕೊಳ್ಳುವಂತೆಯೂ ಹಾಗೂ ಲಾಕ್ಡೌನ್/ ಕರ್ಫ್ಯೂ ಕಾಲದಲ್ಲಿ ಸರಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ಕರೆ ನೀಡಲಾಯಿತು.
ಸಭೆಯಲ್ಲಿ ಪುತ್ತೂರು ಕೇಂದ್ರ ಜುಮ್ಮಾ ಮಸ್ಜಿದ್ ಇದರ ಅಧ್ಯಕ್ಷರಾದ ಎಲ್ ಟಿ ಅಬ್ದುಲ್ ರಝಾಕ್ ಹಾಜಿ, ಪುತ್ತೂರು ತಾಲೂಕು ಸೀರತ್ ಕಮಿಟಿ ಇದರ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಸುರಯ್ಯ,ಕರ್ನಾಟಕ ಮುಸ್ಲಿಂ ಜಮಾತ್ ಪುತ್ತೂರು ತಾಲೂಕು ಇದರ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಕೂರ್ನಡ್ಕ ಜುಮ್ಮಾ ಮಸ್ಜಿದ್ ಪುತ್ತೂರು ಇದರ ಅಧ್ಯಕ್ಷರಾದ ಕೆ.ಎಚ್ ಖಾಸಿಮ್ ಹಾಜಿ ,ಕಲ್ಲೇಗ ಜುಮ್ಮಾ ಮಸ್ಜಿದ್ ಇದರ ಗೌರವಾಧ್ಯಕ್ಷರಾದ ಶಕೂರ್ ಹಾಜಿ ಕಲ್ಲೇಗ, ಸೈಯದ್ ಮಲೆ ಜುಮ್ಮಾ ಮಸ್ಜಿದ್ ಸಾಲ್ಮರ ಪುತ್ತೂರು ಇದರ ಅಧ್ಯಕ್ಷರಾದ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಕರ್ನಾಟಕ ರಾಜ್ಯ ದಾರಿಮೀಸ್ ಎಸೋಸಿಯೇಶನ್ ಕೋಶಾಧಿಕಾರಿ ಕೆ ಆರ್ ಹುಸೈನ್ ದಾರಿಮಿ ರೆಂಜಲಾಡಿ, ಈ- ಫೌಂಡೇಶನ್ ಇಂಡಿಯ ಅಧ್ಯಕ್ಷರಾದ ಡಾಕ್ಟರ್ ಇಸ್ಮಾಯಿಲ್ ಸರ್ಫ್ರಾಝ್, ದ.ಕ. ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷರಾದ ಅಶ್ರಫ್ ಕಲ್ಲೇಗ, ಪ್ರಧಾನ ಕಾರ್ಯದರ್ಶಿ ಸಾಲ್ಮರ ಮಹಮ್ಮದ್ ಶರೀಫ್ ಇಹ್ಸಾನ್ ಫೌಂಡೇಶನ್ ಪುತ್ತೂರು ಇದರ ನಿಕಟಪೂರ್ವ ಅಧ್ಯಕ್ಷರಾದ ಪಿ.ಬಿ ಅಬ್ದುಲ್ಲಾ ಹಾಜಿ , ಝಕರಿಯ ಜುಮಾ ಮಸ್ಜಿದ್ ಬೆಳ್ಳಾರೆ ಇದರ ಆಡಳಿತಾಧಿಕಾರಿ ಯಾಕೂಬ್ ಖಾನ್, ಪಿಎಫ್ಐ ಜಿಲ್ಲಾ ಸಮಿತಿ ಸದಸ್ಯರಾದ ಅಶ್ರಫ್ ಬಾವ, ಬಿ ಹ್ಯೂಮನ್ ಪುತ್ತೂರು ಇದರ ಅಧ್ಯಕ್ಷರಾದ ಇಂತಿಯಾಝ್ ಪಾರ್ಲೆ, ಜಮೀಯತುಲ್ ಫಲಾಹ್ ಪುತ್ತೂರು ಅಧ್ಯಕ್ಷರಾದ ಶೇಕ್ ಝೈನುದ್ದೀನ್ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಯನ್ನು ನೀಡಿದರು.