ಮಂಗಳೂರು : ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಭಾನುವಾರ ಬೆಳಗ್ಗೆ ವಿಚಾರಧೀನ ಖೈದಿಗಳ ನಡುವೆ ನಡೆದ ಹೊಡೆದಾಟ ಮತ್ತು ನಂತರ ಜೈಲು ಸಿಬ್ಬಂದಿಗಳ ಮೇಲೆ ಖೈದಿಗಳ ತಂಡವೊಂದು ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ಧಿಯೊಂದು ಹರಿದಾಡುತ್ತಿದ್ದು, ಈ ಬಗ್ಗೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ರವರು ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲಾ ಕಾರಾಗೃಹದ ಎರಡು ತಂಡಗಳ ನಡುವೆ ಹೊಡೆದಾಟ ನಡೆದ ನಂತರ ಜೈಲು ಸಿಬ್ಬಂದಿಗಳ ಮೇಲೆ ಖೈದಿಗಳು ಹಲ್ಲೆಗೆ ಮುಂದಾಗಿದ್ದರು, ಈ ವೇಳೆ ಇಬ್ಬರೂ ಜೈಲರ್ ಗಳು ಮತ್ತು ಜೈಲು ಸಹಾಯಕ ಅಧೀಕ್ಷಕರ ಚಾಲಕರೊಬ್ಬರಿಗೆ ಗಾಯವಾಗಿದ್ದು, ನಾವು ಅಲ್ಲಿಗೇ ಪರಿಶೀಲನೆ ನಡೆಸಲು ಹೋದಾಗ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಸುಳ್ಳು ಸುದ್ಧಿಯೊಂದು ಹರಿದಾಡುತ್ತಿದ್ದು ಆದ್ರೆ ನಮ್ಮ ಮೇಲೆ ಯಾವುದೇ ಹಲ್ಲೆ ನಡೆದಿಲ್ಲಾ, ಹೊಡೆಡಾಟ ನಡೆಯುವಾಗ ಖೈದಿಗಳನ್ನು ಬೇರೆ ಮಾಡಲು ಹೋದ ವೇಳೆ ಇಬ್ಬರು ಜೈಲರ್ ಮತ್ತು ಒಬ್ಬ ಚಾಲಕನಿಗೆ ಗಾಯವಾಗಿದ್ದು ಬಿಟ್ಟು ನಮಗೆ ಯಾವುದೇ ಗಾಯಗಳು ಆಗಿಲ್ಲ ಅಂತಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.