ಬೆಂಗಳೂರು : ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಇವರ ಸಂಯೋಗದಲ್ಲಿ ನಡೆಯುವ 36ನೇ ಫೆಡರೇಶನ್ ಕಪ್ ವಾಲಿಬಾಲ್ ಚಾಂಪಿಯನ್ಶಿಪ್ ಏಪ್ರಿಲ್ 20ರಿಂದ 26 ವರೆಗೆ ಪಾಂಡಿಚೆರಿಯ ಕಾರ್ಯಕಲ್ ನಲ್ಲಿ ನಡೆಯಲಿದೆ.
ಇದರ ಪ್ರಯುಕ್ತ ಕರ್ನಾಟಕ ರಾಜ್ಯ ಪುರುಷರ ವಾಲಿಬಾಲ್ ತಂಡ ತಯಾರಿಯನ್ನು ನಡೆಸುತ್ತಿದೆ.
ಅಸ್ಸಾಂನ ಗುಹಾಟಿಯಲ್ಲಿ ನಡೆದ 71ನೇ ನ್ಯಾಷನಲ್ ಸೀನಿಯರ್ ಚಾಂಪಿಯನ್ಶಿಪ್ ನಲ್ಲಿ. ಕರ್ನಾಟಕ ರಾಜ್ಯ ತಂಡ ಭಾಗವಹಿಸಿ .ಅದರಲ್ಲಿ ತೇರ್ಗಡೆಗೊಂಡು 36ನೇ ಫೆಡರೇಷನ್ ಕಪ್ ಗೆ ಅರ್ಹತೆಯನ್ನು ಪಡೆದುಕೊಂಡಿತು.
ಇದರ ಸಲುವಾಗಿ ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಏಪ್ರಿಲ್ 8 ರಿಂದ 19ರವರೆಗೆ ಅಭ್ಯಾಸ ತರಬೇತಿಯನ್ನು ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಇದರ ಅಡಾ ಕಮಿಟಿ ಹಮ್ಮಿಕೊಂಡಿದೆ. ವಾಲಿಬಾಲ್ ಆಟಗಾರರಿಗೆ ಊಟ ಮತ್ತು ವಸತಿಯೊಂದಿಗೆ ಹೂನಲು ಬೆಳಕಿನ ಕ್ರೀಡಾಂಗಣದಲ್ಲಿ ಅನುಭವುಳ್ಳ ತರಬೇತುದಾರರಿಂದ ತರಬೇತಿಯನ್ನು ಕೊಡಲಾಗುವುದು.
ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾ ಇವರು ಕಳುಹಿಸಿರುವ 36ನೇ ಫೆಡರೇಶನ್ ಕಪ್ ಸರ್ಕ್ಯುಲರ್ ಪ್ರಕಾರ ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಇದರ ಅಡಾ ಕಮಿಟಿಯ ಐದು ಸದಸ್ಯರು ಜವಾಬ್ದಾರಿ ವಹಿಸಿಕೊಂಡು ಆಟಗಾರರ ಆಯ್ಕೆ ಪ್ರಕ್ರಿಯೆಯನ್ನು ಮಾಡಿರುತ್ತಾರೆ.
ಇದೇ ತಂಡವು ಪಾಂಡಿಚೆರಿಯ ಕಾರ್ಯಕಲ್ ನಲ್ಲಿ ನಡೆಯುವ ಫೆಡರೇಶನ್ ಕಪ್ ಚಾಂಪಿಯನ್ಶಿಪಿಗೆ ಕರ್ನಾಟಕ ರಾಜ್ಯ ಪುರುಷರ ವಾಲಿಬಾಲ್ ತಂಡ ಭಾಗವಹಿಸುವುದೆಂದು ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಅಡಾಕ್ ಕಮಿಟಿಯ ಚೇರ್ಮನ್ ಮತ್ತು ಕಣ್ವೀನರ್ ಆಗಿರುವ ಆಂತೋನಿನ್ ಜೋಸೆಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.




























