ಉಡುಪಿ : ಪ್ರಸಿದ್ಧ ಯಕ್ಷಗಾನ ಕಲಾವಿದರೊಬ್ಬರು ನಾಪತ್ತೆಯಾಗಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮತ್ಯಾಡಿಯ ಗುಡ್ಡೆಯಂಗಡಿ ನಿವಾಸಿ ಉದಯ ಹೆಗಡೆ ಕಡಬಾಳ ನಾಪತ್ತೆಯಾಗಿರುವ ವ್ಯಕ್ತಿ.
ಪ್ರಸಿದ್ಧ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಪುತ್ರಿ ಅಶ್ವಿನಿ ಕೊಂಡದಕುಳಿ ರವರನ್ನು ಪ್ರೀತಿಸಿ ವಿವಾಹವಾಗಿದ್ದರು.
ಪೆರ್ಡೂರು ಮೇಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದಯ್ ಎ. 21 ರಂದು ಯಕ್ಷಗಾನದ
ತಿರುಗಾಟಕ್ಕಾಗಿ ಮನೆಯಿಂದ ತೆರಳಿದ್ದರು. ಬಳಿಕ ಯಾವುದೇ ಫೋನ್ ಸಂಪರ್ಕಕ್ಕೆ ಸಿಗಲಿಲ್ಲ.
ಗಾಬರಿಗೊಂಡ ಪತ್ನಿ ಅಶ್ವಿನಿ ಪೊಲೀಸ್ ಠಾಣೆಗೆ ಹೋಗಿ ನಾಪತ್ತೆಯಾದ ಕುರಿತು ದೂರು ನೀಡಿದ್ದಾರೆ. ಅಳಿಯ ನಾಪತ್ತೆಯಾಗಿರುವ ಕುರಿತು ಮಾವ ರಾಮಚಂದ್ರ ಹೆಗಡೆ ಆತಂಕ ವ್ಯಕ್ತಪಡಿಸಿದ್ದಾರೆ. ಮೂಲತಃ ಉತ್ತರ ಕನ್ನಡ ನಿವಾಸಿಯಾದ ಉದಯ್ ಹಲವು ವರ್ಷಗಳಿಂದ ಅಶ್ವಿನಿ ರನ್ನು ಪ್ರೀತಿಸಿದ್ದು ಕಳೆದ ವರ್ಷ ವಿವಾಹವಾಗಿದ್ದರು.