ಪುತ್ತೂರು : ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡೂರು ಗ್ರಾಮದ ಅಜಲಾಡಿ ಎಂಬಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸರಕಾರದ ಯೋಜನೆ “ದುಡಿಯೋಣ ಬಾ” ಕಾರ್ಯಕ್ರಮದ ಅಂಗವಾಗಿ ಜಲಶಕ್ತಿ ಅಭಿಯಾನದ 2ನೇ ಕಾಮಗಾರಿಯಾಗಿ ಕಿಂಡಿ ಅಣೆಕಟ್ಟೆ ನಿರ್ಮಾಣ ಕಾಮಗಾರಿಗೆ ಎ.30 ರಂದು ಮೂಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪುಷ್ಪ ಎನ್ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಪಂಚಾಯತ್ ಸದಸ್ಯರಾದ ಉಮೇಶ್ ಗೌಡ ಅಂಬಟ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಟಡ್ ಲಾರೆನ್ಸ್ ರೊಡಿಗಸ್, ನರೇಗಾ ಯೋಜನೆಯ ತಾಂತ್ರಿಕ ಅಭಿಯಂತರರಾದ ವಿನೋದ್ ಕುಮಾರ್, ಪಂಚಾಯತ್ ಸದಸ್ಯರಾದ ದುಗ್ಗಪ್ಪ ಎನ್, ಶ್ರೀಮತಿ ಯಶೋಧಾ, ಶ್ರೀಮತಿ ಕಾವ್ಯ ಹಾಗೂ ಸದಾಶಿವ ಶೆಟ್ಟಿ ಪಟ್ಟೆ, ರಮೇಶ್ ಗೌಡ ಪಜಿಮಣ್ಣು, ಗುತ್ತಿಗೆದಾರರಾದ ವಾಸುದೇವ ಸಾಲ್ಯಾನ್, ಕೃಷ್ಣಪ್ಪ ನಾಯ್ಕ, ಜ್ಯೋತಿ ಹಾಗೂ ಸಿಬ್ಬಂದಿಗಳಾದ ದೇವಪ್ಪ ನಾಯ್ಕ ಕೆ, ಶಶಿಧರ ಕೆ ಉಪಸ್ಥಿತರಿದ್ದರು. ರಮೇಶ್ ಗೌಡ ಪಜಿಮಣ್ಣು ಧನ್ಯವಾದ ಸಮರ್ಪಿಸಿದರು.