ಪುತ್ತೂರು ಎಪಿಎಂಸಿ ರಸ್ತೆಯ ಸಿಟಿ ಆಸ್ಪತ್ರೆಯ ಮುಂಭಾಗದಿ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಂತೂ ಮಳೆಗಾಲದ ಸಂದರ್ಭದಲ್ಲಿ ಅಲ್ಲಲ್ಲಿ ಗುಂಡಿಗಳಾಗಿ ಕೆರೆಯಂತಾಗಿಬಿಡುತ್ತಿತ್ತು.ನೀರು ತುಂಬಿ ಸಂಚಾರಕ್ಕೆ ಕಷ್ಟ ಅನಿಸುವಂತಿತ್ತು.

ಹಲವು ವರ್ಷಗಳಿಂದ ಈ ಬಗ್ಗೆ ಅನೇಕ ದೂರುಗಳು, ರಸ್ತೆ ದುರಸ್ತಿಗೆ ಬೇಡಿಕೆಗಳು ಕೇಳಿ ಬಂದಿತ್ತು. ಇದೀಗ ಈ ರಸ್ತೆಗೆ ದುರಸ್ತಿ ಭಾಗ್ಯ ಸಿಕ್ಕಿದೆ. ರಸ್ತೆಯು ಸಂಪೂರ್ಣ ಕಾಂಗ್ರೇಟಿಕರಣ ಗೊಳ್ಳಲಿದೆ. ಮಳೆಗಾಲದಿ ಕೆರೆಯಂತಾಗುತ್ತಿದ್ದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಕಡೆಗೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದ್ದು, ಇನ್ನು ಈ ಸಮಸ್ಯೆಗೆ ವಿದಾಯ ಸಿಗಲು ಕಾಮಗಾರಿಯೂ ಆರಂಭವಾಗಿದೆ . ಹಿಂದೊಮ್ಮೆ ZOOMIN TV ವೆಬ್ಸೈಟ್ ಹಾಗೂ ಚಾನೆಲ್ ನಲ್ಲಿ ಈ ಬಗ್ಗೆ ವಿಶೇಷ ವರದಿಯೂ ಪ್ರಕಟವಾಗಿತ್ತು.

