ಪುತ್ತೂರು : ಪುತ್ತೂರಿನಲ್ಲಿ ಸಿಡಿಲು ಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದ್ದು, ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿಯವರ ಮನೆಗೆ ಮರ ಬಿದ್ದು ಹಾನಿ ಉಂಟಾಗಿದೆ.
ಗಾಳಿ ಸಹಿತ ಭಾರೀ ಪ್ರಮಾಣದ ಮಳೆ ಸುರಿಯುತ್ತಿದ್ದು, ಗಾಳಿಯ ರಭಸಕ್ಕೆ ಪುತ್ತೂರು ತಾಲೂಕಿನ ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿಯವರ ಮನೆಗೆ ಮರ ಬಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎನ್ನಲಾಗಿದೆ.ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.
ಅರುಣ್ ಕುಮಾರ್ ಪುತ್ತಿಲ,ಅಶೋಕ್ ಕುಮಾರ್ ಪುತ್ತಿಲ ,ಸುಂದರ ಗೌಡ, ವಿ. ಎ ತುಳಸಿ, ಉಮೇಶ್ ಅಂಬಟ, ರಮೇಶ್ ಗೌಡ,ಬಾಲಕೃಷ್ಣ,ಪ್ರೇಮಲತಾ ಮೋನಪ್ಪ, ಶೇಷಪ್ಪ ಶೆಟ್ಟಿ ಪೋನೋನಿ,ವಾಸುದೇವ ಸಾಲಿಯಾನ್ ಹಾಗೂ ಶ್ರೀರಾಮ ಗೆಳೆಯರ ಬಳಗ ಪುತ್ತಿಲಇದರ ಸದಸ್ಯರೆಲ್ಲರೂ ಮರ ತೆರವುಗೊಳಿಸುವಲ್ಲಿ ಸಹಕರಿಸುತ್ತಿದ್ದಾರೆ.ಈ ಘಟನೆಯಿಂದಾಗಿ ಸುಮಾರು 1ಲಕ್ಷ ರೂ.ಯಷ್ಟು ನಷ್ಟ ಉಂಟಾಗಿದೆ.