ವಿಟ್ಲ : ವಿದೇಶದಲ್ಲಿ ಕ್ರಿಕೆಟ್ ವಿಚಾರದಲ್ಲಿ ಬೆಳೆದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕಾರಿನಲ್ಲಿ ಬಂದ ತಂಡಯೊಂದು ಯುವಕನಿಗೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ ಘಟನೆ ಉಕ್ಕುಡದಲ್ಲಿ ನಡೆದಿದೆ.
ಕೇಪು ಗ್ರಾಮದ ನಿವಾಸಿ ಹನೀಫ್ ಹಲ್ಲೆಗೊಳಗಾಗಿದ್ದು, ತುಂಬೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಜ್ಪೆ ನಿವಾಸಿ ಮುಸ್ತಾಪ ಮತ್ತು ಹನೀಫ್ ನಡುವೆ ವಿದೇಶದಲ್ಲಿದ್ದ ವೇಳೆ ಕ್ರಿಕೆಟ್ ಪಂದ್ಯಾಟದಲ್ಲಿ ವೈಮನಸ್ಸು ಉಂಟಾಗಿತ್ತು. ಬಳಿಕ ಈ ವಿಚಾರ ರಾಜಿಮಾತುಕತೆಯಲ್ಲಿ ಮುಗಿದಿದ್ದರೂ ಇಬ್ಬರ ನಡುವೆ ದ್ವೇಷ ಹೊಗೆಯಾಡುತ್ತಿತ್ತು. ಹನೀಪ್ ಕೆಲವು ದಿನಗಳ ಹಿಂದೆ ಊರಿಗೆ ಬಂದಿದ್ದರು. ಎರಡು ದಿನಗಳಲ್ಲಿ ಅವರು ವಿದೇಶಕ್ಕೆ ಹಿಂತಿಗಿರುವ ಸಿದ್ಧತೆಯಲ್ಲಿದ್ದರು. ಇಂದು ಸಂಜೆ ಹನೀಫ್ ವಿಟ್ಲ ಪೇಟೆಯಿಂದ ಮನೆಗೆ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ತಂಡ ನಾವು ಮುಸ್ತಾಪನ ಕಡೆಯವರು ಎಂದು ಬೆದರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾರಕಾಯುಧಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.