ಪಶ್ಚಿಮ ಬಂಗಾಳ ರಾಜ್ಯದ ಹೌರ ನಗರದ ರೈಲ್ವೆ ನಿಲ್ದಾಣದಲ್ಲಿ ಹುಣಸೂರಿನ ಕ್ರೀಡಾಪಟುಗಳು ಕ್ರೀಡಾಕೂಟ ಮುಗಿಸಿ ತಮ್ಮ ತಾಯಿನಾಡಿಗೆ ಬರಲಾಗದೇ ಸಂಕಷ್ಟದಲ್ಲಿರುವ ಕ್ರೀಡಾಪಟುಗಳ ನೆರವಿಗೆ ನೆರವಾಗಬೇಕೆಂದು ಹುಣಸೂರಿನ ಮಾಜಿ ಶಾಸಕ ಎಚ್ ಪಿ ಮಂಜುನಾಥ್ ರವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಮಾಡಿದ ಮನವಿ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕ್ರೀಡಾಪಟುಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿ ಕ್ರೀಡಾಪಟುಗಳಿಗೆ ಆತ್ಮಸ್ಥೈರ್ಯ ತುಂಬಿದರು.

ಸಚಿವ ಸಂತೋಷ್ ಲಾಡ್ ರನ್ನು ಕಳುಹಿಸಲಾಗಿದ್ದು, ರಾಜ್ಯದ ಎಲ್ಲಾ ಕ್ರೀಡಾಪಟ್ಟುಗಳನ್ನು ವಿಮಾನದ ಮೂಲಕ ರಾಜ್ಯಕ್ಕೆ ಕರೆ ತರಲು ಎಲ್ಲಾ ವ್ಯವಸ್ಥೆ ಮಾಡಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಮಾಜಿ ಶಾಸಕರಾದ ಎಚ್ ಪಿ. ಮಂಜುನಾಥ್ ತಿಳಿಸಿದ್ದಾರೆ ಎಂದು ಹೌರ ರೈಲ್ವೆ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಕ್ರೀಡಾಪಟುಗಳ ತರಬೇತಿದಾರ ಧರ್ಮಪುರ ಮಹದೇವಸ್ವಾಮಿ ತಿಳಿಸಿದ ಹಿನ್ನೆಲೆ ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಚೇರ್ಮನ್ ಆಂಟೋನಿ ಜೋಸೆಫ್ ತಿಳಿಸಿದ್ದಾರೆ.