ಜೀವನವೇ ಒಂದು ರೀತಿಯ ತಿರುವು ಯಾವ ಸಮಯದಲ್ಲಿ ಏನು ಸಂಭವಿಸುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ.., ಪ್ರತಿಭಾವಂತ ವಿದ್ಯಾರ್ಥಿನಿ, ನಿರೂಪಣೆಯಲ್ಲಿ ತನ್ನದೇ ಛಾಪು ಮೂಡಿಸಿರುವಂತಹ ಪುತ್ತೂರಿನ ಶ್ರೀದೇವಿ ಕೆಲ ದಿನಗಳ ಹಿಂದೆ ನಡೆದಂತಹ ಅಪಘಾತದಲ್ಲಿ ಗಂಭೀರಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀದೇವಿ ಚೇತರಿಸಿಕೊಳ್ಳಲು ಇನ್ನೂ ಕೆಲ ತಿಂಗಳುಗಳೇ ಬೇಕಾಗಿದ್ದು, ಅವರ ಚಿಕಿತ್ಸೆಗೆ ದಾನಿಗಳ ನೆರವಿನ ಸಹಾಯಹಸ್ತ ಬೇಕಾಗಿದೆ.
ಕೆಲ ದಿನಗಳ ಹಿಂದೆ ಕಾಲೇಜು ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಶ್ರೀದೇವಿ ಅವರಿಗೆ ಅಪಘಾತವಾಗಿದ್ದು, ಘಟನೆಯಲ್ಲಿ ಅವರು ಗಂಭೀರಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಅವರು ಮಂಗಳೂರಿನ ಮಂಗಳಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರ ವೈದ್ಯಕೀಯ ಮತ್ತು ಆಸ್ಪತ್ರೆಯ ಬಿಲ್ ಸುಮಾರು 12 ಲಕ್ಷ ಎಂದು ಅಂದಾಜಿಸಲಾಗಿದೆ (ಒಂದೆರಡು ಶಸ್ತ್ರಚಿಕಿತ್ಸಕರು ಮತ್ತು ವೈದ್ಯರು ತಮ್ಮ ಶುಲ್ಕವನ್ನು ಕೈಬಿಟ್ಟ ನಂತರವೂ). ಈ ಹಿನ್ನೆಲೆ ಅವರ ಕುಟುಂಬಕ್ಕೆ ಆರ್ಥಿಕವಾಗಿ ಬೆಂಬಲದ ಅಗತ್ಯವಿದೆ.
ಓರ್ವ ಪ್ರತಿಭಾವಂತ ವಿದ್ಯಾರ್ಥಿನಿಯ ಜೀವನಕ್ಕೆ ದಾನಿಗಳು ತಮ್ಮ ನೆರವಿನ ಸಹಾಯಹಸ್ತ ಬೇಕಾಗಿದೆ.
9108692576(ಶ್ರೀದೇವಿ ಕೆ) – ಗೂಗಲ್ ಪೇ
ಪ್ರೇಮಲತಾ ಕೆ – ಶ್ರೀದೇವಿ ತಾಯಿ
IIFSC–SBIN0040152
ಖಾತೆ ಸಂಖ್ಯೆ–64007174178