ಪುತ್ತೂರು : ಮೇ.19 ರಂದು ತೆಂಕಿಲ ಸಮೀಪ ಆಕ್ಟಿವಾ ಹಾಗೂ ಪಿಕಪ್ ನಡುವೆ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ಶ್ರೀದೇವಿ ರವರು ಗಂಭೀರ ಗಾಯಗೊಂಡಿದ್ದರು. ಭಜರಂಗದಳದ ಕಾರ್ಯಕರ್ತರು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದರು.
ಮೇ.19 ರಂದು ಸಂಜೆ ವೇಳೆ ಆಕ್ಟಿವಾ ವಾಹನದಲ್ಲಿ ದೀಕ್ಷಿತ್ ಹಾಗೂ ಶ್ರೀದೇವಿ ಬರುತ್ತಿದ್ದ ವೇಳೆ ತೆಂಕಿಲ ಸಮೀಪ ಮಹಮ್ಮದ್ ಮಲ್ಲಿಕ್ ಚಲಾಯಿಸುತ್ತಿದ್ದ ಪಿಕಪ್ ವಾಹನ ಆಕ್ಟಿವಾಗೆ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಶ್ರೀದೇವಿ ಗಂಭೀರ ಗಾಯಗೊಂಡಿದ್ದರು.

ಬಜರಂಗದಳ ಕಾರ್ಯಕರ್ತರಾದ ಜಯಂತ್, ಶ್ರೀಧರ್ ತೆಂಕಿಲ, ರಾಮ್ ಪ್ರಸಾದ್ ಮಯ್ಯ, ಭರತ್, ದಿನೇಶ್ ಜೈನ್ ರವರು ಪುತ್ತೂರಿನ ಪ್ರಗತಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿಸಿ ಬಳಿಕ ಮಂಗಳೂರಿನ ಮಂಗಳ ಹಾಸ್ಪಿಟಲ್ ಗೆ ಆಂಬ್ಯುಲೆನ್ಸ್ ಮೂಲಕ ಕಳುಹಿಸಿದ್ದರು.
ಬಜರಂಗದಳ ಕಾರ್ಯಕರ್ತರು 8 ಬಾಟಲ್ ರಕ್ತವನ್ನು ನೀಡಿದ್ದು, ಪ್ರಗತಿ ಆಸ್ಪತ್ರೆಯ ಬಿಲ್ ಅನ್ನು ವಿ.ಹಿಂ.ಪ. ಬಜರಂಗದಳ ಮುಖಂಡರಾದ ಮುರಳಿಕೃಷ್ಣ ಹಸಂತ್ತಡ್ಕ ರವರು ಪಾವತಿಸಿದ್ದು, ಎರಡು ದಿನಗಳ ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಪಿಕಪ್ ವಾಹನ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೈಸೂರು ಕಡೆಯಿಂದ ಮಾಣಿ ಕಡೆಗೆ ಪ್ರಯಾಣಿಸುತ್ತಿದ್ದು, ಚಾಲಕನ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಆಕ್ಟಿವಾಗೆ ಡಿಕ್ಕಿ ಹೊಡೆದಿದೆ ಎಂದು ಆಕ್ಟಿವಾ ಸವಾರ ಭಾಸ್ಕರ್ ಪೂಜಾರಿ ರವರ ಪುತ್ರ ದೀಕ್ಷಿತ್ ರವರು ದೂರು ನೀಡಿದ್ದು, ಈ ಬಗ್ಗೆ ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನದಲ್ಲಿ ಸಹಸವಾರೆಯಾಗಿ ಪ್ರಯಾಣಿಸುತ್ತಿದ್ದ ಶ್ರೀದೇವಿ ರವರು ಗಂಭೀರ ಗಾಯಗೊಂಡು ಮಂಗಳೂರಿನ ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.