ಪುತ್ತೂರು:ಕೊರೊನಾ ಲಾಕ್‌ಡೌನ್ ನಡುವೆಯೇ ಮದುವೆ ಸಮಾರಂಭದ ಮನೆಯೊಂದರಲ್ಲಿ ಡಿಜೆ ಮೂಲಕ ಶಬ್ದ ಮಾಲಿನ್ಯವಾಗುತ್ತಿದ್ದ ದೂರಿನ ಹಿನ್ನೆಲೆಯಲ್ಲಿ ದಾಳಿ
ನಡೆಸಿದ ಅಧಿಕಾರಿಗಳ ತಂಡ ಕಾರ್ಯಕ್ರಮ ನಿಲ್ಲಿಸಿ ಎಚ್ಚರಿಕೆ ನೀಡಿರುವ ಘಟನೆ ವರದಿಯಾಗಿದೆ.
ಇಲ್ಲಿನ ಹಾರಾಡಿ ಮನೆಯಲ್ಲಿ ಮೇ 3ರಂದು ರಾತ್ರಿ ಅಣ್ಣ- ತಮ್ಮಂದಿರ ಮದುವೆ ಸಂಭ್ರಮದಲ್ಲಿ ಕೆಲವರು ಸೇರಿದ್ದರು.ಕೊರೊನಾ ಮಾರ್ಗಸೂಚಿ
ಉಲ್ಲಂಘಿಸಿ ಜನ ಸೇರಿರುವುದಲ್ಲದೆ ಡಿಜೆ ಮೂಲಕ ಜೋರಾಗಿ ಶಬ್ದ ಮಾಲಿನ್ಯವಾಗುತ್ತಿದ್ದ
ಕುರಿತು ಯಾರೋ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ನಗರಸಭಾ ಅಧಿಕಾರಿಗಳಿಗೆ ದೂರು
ನೀಡಿದ್ದರು. ಪರಿಣಾಮ ನಗರಸಭಾ ಕೋವಿಡ್ ಕಾರ್ಯನಿರ್ವಹಣಾ ಅಧಿಕಾರಿಗಳ ತಂಡ
ಪೊಲೀಸರೊಂದಿಗೆ ತೆರಳಿ ಅಲ್ಲಿದ್ದವರಿಗೆ ಎಚ್ಚರಿಕೆ ನೀಡಿ ಕಾರ್ಯಕ್ರಮವನ್ನು ನಿಲ್ಲಿಸಿ ಕೆಲವೊಂದು
ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ವರದಿಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಅವರು ಗೃಹರಕ್ಷಕ ದಳದ ಸಿಬ್ಬಂದಿ ಎಂದು ಸಂದೇಶ ರವಾನೆಯಾಗುತ್ತಿದ್ದು ಆದರೆ ಅವರು ಮೂರು ವರುಷಗಳ ಹಿಂದೆಯೇ ಕೆಲಸವನ್ನು ತೊರೆದಿದ್ದರು.