: ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದೆ. ಅಗತ್ಯ ಸಾಮಾಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು
ತೆರೆಯಲು ಅವಕಾಶ ನೀಡಿದ್ದು ಜನರು ಹೊರಗಡೆ ಬಾರದಂತೆ ಸೂಚನೆ ನೀಡಿದೆ.
ಈ ವಿಷಯವನ್ನು ಗಮನದಲ್ಲಿರಿಸಿಕೊಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತನ್ನ ಗ್ರಾಹಕ ಸೇವಾ ಕೇಂದ್ರಗಳನ್ನು ಸ್ಥಗಿತ ಮಾಡಲು ನಿರ್ಧರಿಸಿದ್ದು, ಸ್ವಸಹಾಯ ಸಂಘಗಳ ಸದಸ್ಯರ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದೆ. ಸ್ವಸಹಾಯ ಸಂಘಗಳ ಸದಸ್ಯರ
ಆರೋಗ್ಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಮೇ 3 ರಿಂದ ಮೇ.15 ರವರೆಗೆ ಯೋಜನೆಯ ಎಲ್ಲ ಸ್ವಸಹಾಯ ಸಂಘಗಳ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದ್ದು,
ಧರ್ಮಸ್ಥಳ ಸ್ವಸಹಾಯ ಸಂಘಗಳ ಎಲ್ಲ ಆರ್ಥಿಕ ಚಟುವಟಿಕೆಗಳು ೨ ವಾರ ಸ್ಥಗಿತ ಕೋವಿಡ್ ಸೋಂಕು ಹರಡುವಿಕೆ ನಿಯಂತ್ರಣದಲ್ಲಿ ಸಹಕರಿಸುವ ಸದುದ್ದೇಶದಿಂದ ಯೋಜನೆಯ ಗ್ರಾಹಕ ಸೇವಾ ಕೇಂದ್ರಗಳಿಗೆ ಕಾರ್ಯನಿರ್ವಹಿಸದಂತೆ ಸೂಚಿಸಿದ್ದು, ಸ್ವಸಹಾಯ ಸಂಘಗಳ ಸದಸ್ಯರು ಹಣ ಸಂಗ್ರಹಣೆಗೆ ತೆರಳದಂತೆ ಹಾಗೂ
ಗ್ರಾಹಕರು ತಮ್ಮ ಸಾಲದ ಕಂತುಗಳನ್ನು ಹಿಂದಿರುಗಿಸುವ
ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಹೇಳಲಾಗಿದೆ.
ಇನ್ನು ಈ ಕುರಿತು ಆದೇಶ ಪ್ರತಿಯನ್ನು ಹೊರಡಿಸಿದ್ದು,
ಮುಂದುವರೆದ ವಾರದ ಕಂತುಗಳನ್ನು
ಕಟ್ಟುವ ಬಗ್ಗೆ ಸದ್ಯದಲ್ಲಿಯೇ ಪ್ರತ್ಯೇಕ ಸುತ್ತೋಲೆಯನ್ನು ಹೊರಡಿಸಲಾಗುವುದು ಎಂದು ಹೇಳಲಾಗಿದೆ.
ಲಸಿಕಾ ಕೇಂದ್ರಗಳನ್ನು ತೆರೆಯಲು ಸಹಕಾರ : ಸದಾ ಸಮಾಜಮುಖಿ ಕೆಲಸಗಳಿಂದಲೇ ಗುರುತಿಸಿ ಕೊಂಡಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೋವಿಡ್ ಆರೋಗ್ಯ
ಬಿಕ್ಕಟ್ಟಿನ ಸಂದರ್ಭ ದಲ್ಲಿಯೂ ತನ್ನ ವೃತ್ತಿಪರತೆಯನ್ನು ಉಳಿಸಿಕೊಂಡಿದೆ. ಇದೀಗ ಪೂಜ್ಯ ಖಾವಂದರ ಮಾರ್ಗದರ್ಶನದಂತೆ ಎಲ್ಲ ಗ್ರಾಮಗಳಲ್ಲಿರುವ ಗ್ರಾಹಕ ಸೇವಾ ಕೇಂದ್ರಗಳನ್ನು ಲಸಿಕೆ ಕೇಂದ್ರಗಳಾಗಿ ಮಾರ್ಪಾಡು
ಮಾಡಲಾಗಿದ್ದು, ಗ್ರಾಮೀಣ ಮಟ್ಟದಲ್ಲಿ ಪ್ರತಿಯೋರ್ವರಿಗೂ ಲಸಿಕೆ ನೀಡಬೇಕೆಂಬ ಉದ್ಧೇಶ ದಿಂದ ಈ ನಿರ್ಧಾರ ತೆಗೆದುಕೊಳ್ಳ ಲಾಗಿದೆ. ಅಲ್ಲದೇ ಈ ಸಂಬಂಧ ಸರಕಾರಕ್ಕೆ
ಪತ್ರ ಬರೆಯಲಾಗಿದ್ದು, ಪ್ರತಿಯೊಂದು ಗ್ರಾಮದಲ್ಲಿ ಲಸಿಕೆ ನೀಡಲು ಬೇಕಾದ ವ್ಯವಸ್ಥೆ ಮಾಡಲು ಹಾಗೂ ಕಾರ್ಯನಿರ್ವಹಿಸಲು ಸ್ವಯಂಸೇವಕರನ್ನು ಒದಗಿಸುವುದಾಗಿ ಯೋಜನೆಯು ಸರಕಾರಕ್ಕೆ
ಸೂಚಿಸಿದೆ.
ರಾಜ್ಯದಲ್ಲಿ ಲಸಿಕೆಗಳು ಲಭ್ಯ