ವಿಟ್ಲ: ವಿಟ್ಲದಲ್ಲಿ ಪೊಲೀಸರು ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆಗೆ ಇಳಿದಿದ್ದು, ಅನಗತ್ಯವಾಗಿ ವಿಟ್ಲ ಪೇಟೆಗೆ ಬರುವ ವಾಹನ ಮೇಲೆ ವಿಟ್ಲ ಎಸೈ ವಿನೋದ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ಪೊಲೀಸರು ಕ್ರಮ ಜರುಗಿಸುತ್ತಿದ್ದಾರೆ.
ವಿಟ್ಲ- ಪುತ್ತೂರು ರಸ್ತೆಯ ಮೇಗಿನಪೇಟೆ, ಮಂಗಳೂರು ರಸ್ತೆಯ ಬೊಬ್ಬೆಕೇರಿ, ಕಾಸರಗೋಡು ರಸ್ತೆಯ ಬಾಕಿಮಾರ್, ಸಾಲೆತ್ತೂರು ರಸ್ತೆಯ ನಾಡಕಚೇರಿ ಬಳಿ ನಾಕಾಬಂಧಿ ಅಳವಡಿಸಿ, ವಾಹನ ಪರಿಶೀಲನೆ ನಡೆಸುತ್ತಿದ್ದಾರೆ. ಸರಿಯಾದ ದಾಖಲೆ ತೋರಿಸದ ವಾಹನಗಳ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.