ಮಂಗಳೂರು : ಮಂಗಳೂರಿನ ಶಾಸಕ ಮತ್ತು ಮಾಜಿ ಸಚಿವರ ನಡುವೆ ನಡೆದ ಟ್ವಿಟರ್ ವಾರ್ ರೊಂದು ಇದೀಗ ಸುದ್ಧಿಯಾಗುತ್ತಿದ್ದು, ಮಾಜಿ ಸಚಿವ ಯು. ಟಿ ಖಾದರ್ ರವರು ತಮ್ಮ ಟ್ವಿಟರ್ ನಲ್ಲಿ ‘ಬಿಜೆಪಿ ನಾಯಕರ ಆತ್ಮನಿರ್ಭರತೆಗೆ ಚಪ್ಪಾಳೆ ಹೊಡೆಯ ಬೇಕೋ, ದೀಪ ಹಚ್ಚ ಬೇಕೋ ?’- ಖಾದರ್ ವ್ಯಂಗ್ಯವಾಡಿದ್ದರು ಅದಕ್ಕೆ ಶಾಸಕ ವೇದವ್ಯಾಸ ಕಾಮತ್ ರವರು ‘ಮೆಚ್ಚಬೇಕು ನಿಮ್ಮ ಆತ್ಮನಿರ್ಭರತೆಯನ್ನು’ ಎಂದು ಟ್ವೀಟ್ ಮಾಡುವ ಮೂಲಕ ಖಾದರ್ ರವರಿಗೆ ತಿರುಗೇಟು ನೀಡಿದ್ದಾರೆ.
ಬ್ರಹರೈನ್ ನಿಂದ ಬಂದ ಆಕ್ಸಿಜನ್ ಹಡಗೇರಿ ಖುಷಿಪಡುವ ಬಿಜೆಪಿ ನಾಯಕರ “ಆತ್ಮನಿರ್ಭರತೆಗೆ ಚಪ್ಪಾಳೆ ಹೊಡೆಯ ಬೇಕೋ ದೀಪ ಹಚ್ಚ ಬೇಕೋ ತಿಳಿಯುತ್ತಿಲ್ಲ” ಎಂದು ಮಾಜಿ ಸಚಿವ ಯು.ಟಿ ಖಾದರ್ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದ ಅವರು, “ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಬಳಸಲು ನಮಗೆ ಅವಕಾಶವಿಲ್ಲ. ದೂರದ ಬಹರೈನ್ ನಿಂದ ಬಂದ ಆಕ್ಸಿಜನ್ ಹಡಗೇರಿ ಖುಷಿಪಡುವ ಬಿಜೆಪಿ ನಾಯಕರ ಆತ್ಮನಿರ್ಭರತೆಗೆ ಚಪ್ಪಾಳೆ ಹೊಡೆಯ ಬೇಕೋ ದೀಪ ಹಚ್ಚ ಬೇಕೋ ತಿಳಿಯುತ್ತಿಲ್ಲ. ಧಿಕ್ಕಾರವಿದೆ ನಿಮ್ಮ ಅಸಮರ್ಥತೆಗೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಹರೈನ್ ಸೇರಿದಂತೆ ನಮ್ಮ ದೇಶದಿಂದ ಬೇರೆ ದೇಶಗಳಿಗೆ ವಾಕ್ಸಿನ್ ಕಳುಹಿಸಿದಾಗ ಜರೆದವರು ನೀವುಗಳಲ್ಲವೇ? ಈಗ ಬಹರೈನ್ ಪರವಾಗಿ ಚಪ್ಪಾಳೆ ತಟ್ಟುತ್ತಿದ್ದೀರಿ. ಮೆಚ್ಚಬೇಕು ನಿಮ್ಮ ಆತ್ಮನಿರ್ಭರತೆಯನ್ನು ” ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಮಾಜಿ ಸಚಿವ ಯು.ಟಿ ಖಾದರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಬಹ್ರೈನ್ ನಿಂದ 40 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ನವಮಂಗಳೂರು ಬಂದರಿಗೆ ಬಂದಿದ್ದ ಐ ಎನ್ ಎಸ್ ತಲ್ವಾರ್ ಹಡಗನ್ನು ಬಿಜೆಪಿ ಸ್ವಾಗತಿಸಿದ ವಿಚಾರವಾಗಿ ಮಾಜಿ ಸಚಿವ ಯು.ಟಿ ಖಾದರ್ “ಬಿಜೆಪಿ ನಾಯಕರ ಆತ್ಮನಿರ್ಭರತೆಗೆ ಚಪ್ಪಾಳೆ ಹೊಡೆಯ ಬೇಕೋ ದೀಪ ಹಚ್ಚ ಬೇಕೋ ತಿಳಿಯುತ್ತಿಲ್ಲ. ಧಿಕ್ಕಾರವಿದೆ ನಿಮ್ಮ ಅಸಮರ್ಥತೆಗೆ” ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದರು.
ಇದಕ್ಕೆ ಟ್ವೀಟ್ ಮೂಲಕ ಅವರದೇ ದಾಟಿಯಲ್ಲಿ ತಿರುಗೇಟು ನೀಡಿರುವ ಶಾಸಕ ಕಾಮತ್ ” ಯು.ಟಿ ಖಾದರ್ ಅವರೇ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕಾರ್ಯಗಳ ಬಗ್ಗೆ ಮೊದಲು ತಿಳಿಯಿರಿ. ಈಗಾಗಲೇ ವೆನ್ಲಾಕ್ ಸೇರಿ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಬಹರೈನ್ ನಿಂದ ಆಕ್ಸಿಜನ್ ತುಂಬಿರುವ ಹಡಗು ಬಂದಾಗ ಈ ಭಾಗದ ಜನರ ಪ್ರತಿನಿಧಿಗಳಾಗಿ ಅದನ್ನು ಸ್ವಾಗತಿಸಿದ್ದೇವೆ. ಅದಕ್ಕಾಗಿ ತಾವು ದೀಪ ಹಚ್ಚುವುದೋ ಅಥವಾ ಚಪ್ಪಾಳೆ ತಟ್ಟುವ ಅವಶ್ಯಕತೆಯಿಲ್ಲ. ನಮ್ಮ ದೇಶದಿಂದ ಬೇರೆ ದೇಶಗಳಿಗೆ (ಬಹರೈನ್ ಸೇರಿದಂತೆ) ವಾಕ್ಸಿನ್ ಕಳುಹಿಸಿದಾಗ ಜರೆದವರು ನೀವುಗಳಲ್ಲವೇ? ಈಗ ಬಹರೈನ್ ಪರವಾಗಿ ಚಪ್ಪಾಳೆ ತಟ್ಟುತ್ತಿದ್ದೀರಿ. ಮೆಚ್ಚಬೇಕು ನಿಮ್ಮ ಆತ್ಮನಿರ್ಭರತೆಯನ್ನು” ಎಂದು ಹೇಳಿದ್ದಾರೆ.