ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಮೇ 10ರಿಂದ ರಾಜ್ಯಾದ್ಯಂತ ಲಾಕ್ ಡೌನ್ ಘೋಷಿಸಿರುವುದರಿಂದ ಧಾರವಾಹಿ, ರಿಯಾಲಿಟಿ ಶೋ ಸೇರಿದಂತೆ ಧಾರವಾಹಿ, ಚಿತ್ರೀಕರಣಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಟಿವಿ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.
ಲಾಕ್ ಡೌನ್ ಜಾರಿ ಹಿನ್ನೆಲೆಯಲ್ಲಿ ಮೇ 10ರಿಂದ 24ರವರೆಗೆ ಶೂಟಿಂಗ್ ಗಳಿಗೂ ಬ್ರೇಕ್ ಹಾಕಲಾಗಿದೆ. ಬೆಂಗಳೂರು ಹೊರವಲಯ, ಪ್ರವಾಸಿ ತಾಣ, ರೆಸಾರ್ಟ್ ಯಾವುದೇ ಭಾಗದಲ್ಲಿ ಚಿತ್ರೀಕರಣಗಳು ನಡೆಸಿದರೂ ಅಂತವರ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಅಲ್ಲದೇ ಬಿಗ್ ಬಾಸ್ ಶೂಟಿಂಗ್ ಕೂಡ ರದ್ದಾಗಲಿದೆ ಎಂದು ಸ್ಪಷ್ಟಪಡಿಸಿರುವ ಅವರು, ಚಿತ್ರೀಕರಣವಾಗಿರುವ ಎಪಿಸೋಡ್ ಗಳು ಮಾತ್ರ ಪ್ರಸಾರವಾಗಲಿದ್ದು, ಮೇ 24ರವರೆಗೆ ಹೊಸ ಎಪಿಸೋಡ್ ಗಳ ಚಿತ್ರೀಕರಣಕ್ಕೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.