ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್, ಸಂಯೋಜನೆಯೊಂದಿಗೆ ಹಾಗೂ ಧರ್ಮಸ್ಥಳ ಕಟ್ಟಡದ ಎಲ್ಲಾ ವಿಭಾಗದವರ ಸಹಯೋಗದೊಂದಿಗೆ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜ್ರಂಭಣೆಯಲ್ಲಿ ಆಚರಿಸಲಾಯಿತು.

ದ್ವಜರೋಹಣವನ್ನು ಶೋಪಿ. ಆರ್. ಕೃಷ್ಣ (ಸೀನಿಯರ್ ಮ್ಯಾನೇಜರ್ ಕೆನರ ಬ್ಯಾಂಕ್ ಪುತ್ತೂರು ಇವರು ನೆರೆವೇರಿಸಿ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ ಆಚರಣೆಯ ಮಹತ್ವ “ಸ್ವಾಂತ್ರತ್ರ್ಯ ದಿನಾಚರಣೆ ದೇಶದ ಅಮೂಲ್ಯ ಅಸ್ಮಿತೆ” ಹಾಗೂ ಇದನ್ನು ಉಳಿಸಿ ಬೆಳೆಸುದರಲ್ಲಿ ನಾವೆಲ್ಲ ಅರ್ಪಣಾಮನೋಭಾದಿಂದ ಕಾರ್ಯನಿರ್ವಹಿಸಬೇಕು ಹಾಗೂ ನಮ್ಮ ಸಂಸ್ಕೃತಿಯ ಕುರಿತು ಮತನಾಡುತ್ತ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭ ಹಾರೈಕೆಯನ್ನು ಮಾಡಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸುಧಾಕರ್ ಮ್ಯಾನೇಜರ್, ಪರಿವಾರ ಕೋ. ಒಪರೇಟಿವ್ ಸೊಸೈಟಿ ಇವರು ಮಾತನಾಡಿ, ದೇಶವನ್ನು ಪ್ರಗತಿಯತ್ತ ಸಾಗಿಸಲು ನಾವೆಲ್ಲರು ಒಟ್ಟಾಗಿ ಹೋರಾಡಬೇಕು ಎಂದು ಹೇಳಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರಾದ ಗೋಕುಲ್‌ನಾಥ್ ಪಿ. ವಿ. ಇವರು ಮತನಾಡಿ ಭಾರತೀಯರು ಸ್ವಾತಂತ್ರ್ಯವನ್ನು ಪಡೆಯಲು ಹೇಗೆ ಪ್ರಯತ್ನ ಪಟ್ಟರು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಅಂಗಡಿಯ ಮಾಲಕರು ಸಿಬ್ಬಂದಿಗಳು ಮತ್ತು ಸಿಬ್ಬಂದಿ ವರ್ಗ, ಹಾಗೂ ಸಂಸ್ಥೆಯ ಪ್ರಾಂಶುಪಾಲರು, ಮುಖ್ಯ ಗುರುಗಳು, ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಗೆ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು. ಕಾರ್ಯಕ್ರಮವನ್ನು ಕು. ಮಧುಶ್ರೀ ಇವರು ನಿರೂಪಿಸಿದರು.