ಪುತ್ತೂರು : ದೇಶದ 76ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬದ್ರಿಯಾ ಜುಮಾ ಮಸೀದಿ ಕೆಮ್ಮಾಯಿಯಲ್ಲಿ ಮುಈನುಲ್ ಇಸ್ಲಾಂ ಜಮಾಅತ್ ಕಮಿಟಿ ಹಾಗು ಖಿದ್ಮತುಲ್ ಇಸ್ಲಾಂ ಯಂಗ್ಮೆನ್ಸ್ ಎಸೋಸಿಯೇಷ್ ವತಿಯಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು.

ಜಮಾಅತ್ ಕಮಿಟಿ ಅಧ್ಯಕ್ಷರಾದ ಎ.ಕೆ ಬಶೀರ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಇರ್ಷಾದ್ ಸಖಾಫಿ ಅವರು ದೇಶಕ್ಕೆ ಸ್ವಾತಂತ್ರ್ಯ ಲಭಿಸಲು ಬಹದ್ದೂರ್ ಷಾ ಜಫರ್ ಹಾಗೂ ಇನ್ನಿತರರು ನಡೆಸಿದ ಹೋರಾಟವನ್ನು ಮಕ್ಕಳಿಗೆ ವಿವರಿಸಿದರು.
ಮುತಅಲ್ಲಿಂ ಮಕ್ಕಳಿಂದ ಸ್ವಾತಂತ್ರ್ಯದ ಕುರಿತು ಆಶು ಭಾಷಣ ನಡೆಯಿತು. ಮದ್ರಸದ ಸದರ್ ಉಸ್ತಾದ್ ಮಜೀದ್ ಮುಸ್ಲಿಯಾರ್ ಸ್ವಾಗತಿಸಿದರು.

ವೇದಿಕೆಯಲ್ಲಿ ಜಮಾಅತ್ ಕಮಿಟಿ ಅಧ್ಯಕ್ಷರಾದ ಬಶೀರ್ ಹಾಜಿ, ಕಾರ್ಯದರ್ಶಿ ಲತೀಫ್ ಹಾಜಿ, ಮದ್ರಸ ಉಸ್ತುವಾರಿ ಹಸನ್ ಹಾಜಿ, ಜಮಾಅತ್ ಕಮಿಟಿ ಪದಾಧಿಕಾರಿಗಳಾದ ಉಮರ್ ಹಾಜಿ ಮಸ್ತಂ, ಮೂಸ ಹಾಜಿ, ಅಶ್ರಫ್ ಹಾಜಿ ದಾರಂದಕುಕ್ಕು, ಯಂಗ್ಮೆನ್ಸ್ ಕಾರ್ಯದರ್ಶಿಯಾದ ಅಝೀಝ್ ಫ್ಯಾನ್ಸಿ, ಮದ್ರಸ ಉಸ್ತಾದರಾದ ಬಶೀರ್ ಉಸ್ತಾದ್, ಅಹಮದ್ ಮುಸ್ಲಿಯಾರ್ ಮುಹಮ್ಮದ್ ಮುಕ್ರಿಕ, ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯದ ಪ್ರತಿಜ್ಞೆ ಸ್ವೀಕರಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು. ಯಂಗ್ಮೆನ್ಸ್ ಸದಸ್ಯ ಅಝೀಝ್ ಟೋಪ್ಕೋ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.