ಪುತ್ತೂರು : ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಶಾಲಾಧ್ಯಕ್ಷರಾದ ಜಯರಾಮ ಕೆದಿಲಾಯ ಶಿಬರ ರವರು ದ್ವಜಾರೋಹಣ ಮಾಡಿ ಮಾತನಾಡುತ್ತಾ ಜಾತಿ ಮತಕ್ಕೆ ಹೆಚ್ಚಿನ ಗಮನ ಕೊಡದೆ ದೇಶದ ಒಳಿತಿಗೆ ಹೆಚ್ಚಿನ ಗಮನವಿಟ್ಟಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಶಾಲಾ ಕಾರ್ಯದರ್ಶಿಗಳಾದ ಕೃಷ್ಣಪ್ರಸಾದ್ ಕೆದಿಲಯರು ಮಾತನಾಡಿ, ಇತಿಹಾಸದ ಘಟನೆಯನ್ನು ನೆನಪಿಸುತ್ತಾ ಮಕ್ಕಳಿಗೆ ಬ್ರಿಟಿಷರ ಆಡಳಿತವನ್ನು ಮತ್ತು ಸ್ವಾತಂತ್ರ ಹೋರಾಟಗಾರರ ನಾಯಕರುಗಳನ್ನು ನೆನಪಿಸಿದರು.
ಶಾಲಾ ಸಂಚಾಲಕರಾದ ಭಾಸ್ಕರ ಆಚಾರ್ ಮಾತನಾಡಿ, ಇನ್ನೊಬ್ಬರಿಗೆ ಸಹಾಯ ಮಾಡುವ ಗುಣವನ್ನು ಬೆಳೆಸಿ, ಪ್ರಾಮಾಣಿಕ ಸೇವೆ, ಇನ್ನೊಬ್ಬರಿಗೆ ಅನ್ಯಾಯ ಮಾಡದೇ ಬದುಕುವುದು ಹಾಗೂ
ಸಾಮೂಹಿಕ ಗೆಳೆತನದಿಂದ ಒಳ್ಳೆಯ ಕೆಲಸ ಮಾಡಿ ದೇಶವನ್ನು ಅಭಿವೃದ್ಧಿ ಪಡಿಸುವುದೆ ನಿಜವಾದ ದೇಶಪ್ರೇಮ ಎಂದರು.

ತದ ನಂತರ ಸ್ವಾತಂತ್ರ ದಿನಾಚರಣೆಯಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಾಗೂ ಈಜು ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ 200 ಮೀಟರ್ ಫ್ರೀ ಸ್ಟೈಲ್ ನಲ್ಲಿ ಪ್ರಥಮ, 200 ಮೀಟರ್ ಇಂಡಿವಿಜ್ಯುವಲ್ medely ದ್ವಿತೀಯ ಹಾಗೂ 50 ಮೀಟರ್ ಬ್ಯಾಕ್ ಸ್ಟ್ರೋಕ್ ನಲ್ಲಿ ದ್ವಿತೀಯ ಸ್ಥಾನ ಗಳಿಸಿದ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಅಮನ್ ರಾಜ್ ನಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.

ವಿದ್ಯಾರ್ಥಿಗಳಿಂದ ದೇಶದ ಐತಿಹಾಸಿಕ ಘಟನೆಗಳನ್ನು ನೆನಪಿಸುವಂತಹ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಜಯಮಾಲಾ ವಿ ಎನ್ ರವರು ಎಲ್ಲರನ್ನು ಆದರದಿಂದ ಸ್ವಾಗತಿಸಿದರು. ಶಿಕ್ಷಕಿ ಸೌಮ್ಯ ವಂದಿಸಿದರು.


