ಪುತ್ತೂರು : ರೋಟರಿಪುರ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಅಂಗನವಾಡಿ ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ನಗರ ಸಭಾ ಸದಸ್ಯರಾದ ರೋಹಿಣಿ ಕೇಶವ ಧ್ವಜಾರೋಹಣ ನೆರವೇರಿಸಿ, ಹಿತ ನುಡಿಗಳನ್ನಾಡಿದರು.
ಹಿರಿಯರಾದ ನಾರಾಯಣ ರೈ ಸಹಕರಿಸಿದರು. ಪ್ರಗತಿ ಯುವಕ ಮಂಡಲದ ಸದಸ್ಯ ಆನಂದ ಬಿ.ಡಿ., ಶುಭ ಹಾರೈಸಿದರು.
ಪ್ರಗತಿ ಯುವಕ ಮಂಡಲದ ಸದಸ್ಯರು, ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಪ್ರೇಮಾ ತಾರಾನಾಥ ಮತ್ತು ಸದಸ್ಯರು, ಪುಟಾಣಿ ಮಕ್ಕಳು, ಮಕ್ಕಳ ಪೋಷಕರು, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷರಾದ ರೇಖಾ ಮತ್ತು ಸದಸ್ಯರು ಹಾಜರಿದ್ದರು.
ಅಂಗನವಾಡಿ ಕಾರ್ಯಕರ್ತೆ ಜಯಶ್ರೀ ಸ್ವಾಗತಿಸಿ, ಆನಂದ ಬಿ.ಡಿ. ಧನ್ಯವಾದ ಸಲ್ಲಿಸಿದರು. ಪ್ರೇಮಾ ತಾರಾನಾಥ ಕಾರ್ಯಕ್ರಮ ನಿರೂಪಿಸಿದರು.
ಅಂಗನವಾಡಿ ಸಹಾಯಕಿ ಗೀತಾ, ಲೀಲಾವತಿ, ಲಲಿತಾ, ಮಾನ್ವಿತಾ ಸಹಕರಿಸಿದರು.
ಸೌಮ್ಯ ಹರೀಶ್, ನಾರಾಯಣ ರೈ, ರೋಹಿಣಿ ಕೇಶವ, ಗೀತಾ ಚಂದ್ರಶೇಖರ ಸಿಹಿತಿಂಡಿ ನೀಡಿದರು. ಮಕ್ಕಳ ಪೋಷಕರು ಲಘು ಉಪಹಾರದ ವ್ಯವಸ್ಥೆ ಮಾಡಿದ್ದರು.