ವಿಟ್ಲ : ಕುಳಾಲು ಶಾಲೆಯಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಎಸ್.ಡಿ.ಎಂ.ಸಿ.ಉಪಾಧ್ಯಕ್ಷ ರಮೇಶ್ ಕಾಮತ್ ಧ್ವಜಾರೋಹಣ ನೆರವೇರಿಸಿದರು.
ಸಭಾ ಕಾರ್ಯಕ್ರಮದಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಮಾತನಾಡಿ, ಅದೆಷ್ಟೋ ಮಹನೀಯರ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ಲಭಿಸಿದ್ದು,ಇಂದಿನ ಪೀಳಿಗೆಯವರು ಅದನ್ನು ತಿಳಿದುಕೊಂಡು ಭವ್ಯ ಭಾರತವನ್ನು ನಾವೆಲ್ಲ ಕಟ್ಟೋಣ ಎಂದರು.

ಈ ಸಂದರ್ಭದಲ್ಲಿ ಕೊಳ್ನಾಡು ಗ್ರಾಮಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಾಲೆಯ ಹಿರಿಯ ವಿದ್ಯಾರ್ಥಿ ಅಶ್ರಫ್ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಗ್ರಾಮಪಂಚಾಯತ್ ಸದಸ್ಯರಾದ ರತ್ನ, ಸಂಜೀವಿ, ಭಾಗೀರಥಿ, ಜಯಂತಿ ಎಸ್ ಪೂಜಾರಿ, ಪದ್ಮನಾಭ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಶಿಧರ ರೈ.ಉಪಾಧ್ಯಕ್ಷ ಆನಂದ ಪೂಜಾರಿ.ವಾರಾಹಿ ಯುವವೃಂದದ ಹರೀಶ್ ಗೌಡ,ಶಾರದಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಅಮರನಾಥ ಶೆಟ್ಟಿ, ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ತಿಮ್ಮು ಸ್ವಾಗತಿಸಿದರು. ಸಹಶಿಕ್ಷಕ ಹೇಮ ಎಂ.ಟಿ. ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.
ಅತಿಥಿ ಶಿಕ್ಷಕಿ ಪ್ಲೇವಿಯನ್ ಡಿ ಸೋಜ ಮತ್ತು ಗೌರವ ಶಿಕ್ಷಕಿ ಡೆಸಿನಾ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ಸಂಧ್ಯಾ ಧನ್ಯವಾದಗೈದರು.
ಸಹಶಿಕ್ಷಕ ಪರಮೇಶ್ವರ ಆಚಾರ್ಯ ಮಂಕುಡೆನೆಡ್ಯಾಳ ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಎಂ.ಸಿ. ಸದಸ್ಯರು,ಪೋಷಕರು, ಹಿರಿಯ ವಿದ್ಯಾರ್ಥಿಗಳು,ಊರ ವಿದ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.