ಪುತ್ತೂರು : ಹಯಾತುಲ್ ಇಸ್ಲಾಂ ಮದ್ರಸ ರಹ್ಮಾನಿಯಾ ಜುಮಾ ಮಸೀದಿ ಮುಕ್ವೆ ಇದರ ವತಿಯಿಂದ 76ನೇ ಸ್ವಾತಂತ್ರ್ಯೋತ್ಸವ ಮದರಸದ ವಠಾರದಲ್ಲಿ ನಡೆಯಿತು.

ಜಮಾತ್ ಅಧ್ಯಕ್ಷರಾದ ಇಬ್ರಾಹಿಂ ಮುಲಾರ್ ಧ್ವಜಾರೋಹಣ ನೆರವೇರಿಸಿದರು.
ಖತೀಬರಾದ ಅನ್ವರ್ ಅಲಿ ದಾರಿಮಿ ದುವಾ ನೆರವೇರಿಸಿ ಸಂದೇಶ ಭಾಷಣ ನಡೆಸಿದರು.

ಕಾರ್ಯಕ್ರಮದಲ್ಲಿ ಮದ್ರಸ ವಿದ್ಯಾರ್ಥಿಗಳಿಂದ ಆಕರ್ಷಕ ಸ್ಕೌಟ್ ಪ್ರದರ್ಶನ ನಡೆಯಿತು. ಸ್ವಾತಂತ್ರ್ಯೋತ್ಸವದ ಭಾಗವಾಗಿ ವಿದ್ಯಾರ್ಥಿಗಳಿಗೆ ನಡೆಸಲ್ಪಟ್ಟ ಸ್ಪರ್ಧಾ ಕಾರ್ಯಕ್ರಮದ ಬಹುಮಾನ ವಿತರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಮದ್ರಸ ಅಧ್ಯಾಪಕರು, ವಿದ್ಯಾರ್ಥಿಗಳು, ಜಮಾತ್ ಸಮಿತಿ ಸದಸ್ಯರು, ಪೋಷಕರು, ಜಮಾತ್ ಬಾಂಧವರು, ಎಸ್ ಕೆ ಎಸ್ ಎಸ್ ಎಫ್ ಶಾಖೆಯ ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಅಧ್ಯಾಪಕರಾದ ಉಮರ್ ಯಮಾನಿ ಸ್ವಾಗತಿಸಿ, ವಂದಿಸಿದರು.
