ಪುತ್ತೂರು : ಬನ್ನೂರು ಕೃಷ್ಣನಗರದ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಡಳಿತ ಮಂಡಳಿ ಮತ್ತು ಪೋಷಕರ ಸಮ್ಮುಖದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವಸಂತ ದೇವಸ್ಯ ಎಕ್ಸ್ ಹವಲ್ದಾರ್, ಇಂಡಿಯನ್ ಆರ್ಮಿ ಆಗಮಿಸಿದ್ದರು.
ಸಭೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ, ಉಪಾಧ್ಯಕ್ಷ ಉಮೇಶ್ ಮಳುವೇಲು, ಸಂಚಾಲಕ ಎ ವಿ ನಾರಾಯಣ, ಎವಿಜಿ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಉಪಕಾರ್ಯದರ್ಶಿ ಕೆ.ವಿ. ಪ್ರತಿಭಾ ದೇವಿ, ಉಪಾಧ್ಯಕ್ಷರಾದ ಕೆ.ವಿ. ಪುಷ್ಪಾವತಿ ಗೌಡ ಕಳುವಾಜೆ, ಹಾಗೂ ಸಂಸ್ಥೆಯ ಖಜಾಂಚಿ ವನಿತಾ ಎ.ವಿ., ನಿರ್ದೇಶಕರುಗಳಾದ ಗಂಗಾಧರ ಗೌಡ ಎ.ವಿ., ಸೀತಾರಾಮ ಪೂಜಾರಿ ಮೇಲ್ಮಜಲು, ಡಾ. ಅನುಪಮ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ವಸಂತ ದೇವಸ್ಯ ರನ್ನು ಸ್ಮರಣೆಕೆ ನೀಡಿ ಗೌರವಿಸಲಾಯಿತು. ಸ್ವಾತಂತ್ರ್ಯ ದಿನದ ಮಹತ್ವದ ಕುರಿತು ಅತಿಥಿಯಾದ ವಸಂತ ದೇವಸ್ಯ ಮಾತನಾಡಿದರು.
ಶಾಲೆಯಲ್ಲಿ ನಡೆದ ಇತರ ಚಟುವಟಿಕೆಗಳ ಬಹುಮಾನ ವಿತರಣೆಯನ್ನು ಮುಖ್ಯ ಅತಿಥಿ ನಡೆಸಿಕೊಟ್ಟರು. ನಂತರ ಎವಿಜಿ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಶಿಕ್ಷಕಿ ಯಶುಭ, ಶಾಲಾ ಪ್ರಾಂಶುಪಾಲೆ ಉಷಾ ಕಿರಣ, ವಂದನಾರ್ಪಣೆಯನ್ನು ಶಾಲೆಯ ಶಿಕ್ಷಕಿ ವನಿತಾ ನೆರವೇರಿಸಿದರು.