ಉಪ್ಪಿನಂಗಡಿ : ವಾಹನದಲ್ಲಿ ಎಂಡಿಎಂಎ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಕೂಟೇಲು ಎಂಬಲ್ಲಿ ನಡೆದಿದೆ.
ಬಜತ್ತೂರು ನಿವಾಸಿ ಲತೀಫ್ ಬಿ.ಎ (35) , ಬೆಳ್ತಂಗಡಿ ಕೊಕ್ಕಡ ನಿವಾಸಿ ಬಿ ಜುನೈದ್ (30) ಬಂಧಿತರು.
ಆ.15 ರಂದು ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಕೂಟೇಲು ಎಂಬಲ್ಲಿ ಉಪ್ಪಿನಂಗಡಿ ಠಾಣಾ ಪೊಲೀಸರು ವಾಹನ ತಪಾಸಣೆ ಮಾಡಿಕೊಂಡಿರುವಾಗ ಸದರಿ ಮಾರ್ಗವಾಗಿ ಬಂದ ಸ್ಕಾರ್ಫಿಯೋ ವಾಹನವನ್ನು ನಿಲ್ಲಿಸಲು ಸೂಚಿಸಿದ್ದು, ಈ ವೇಳೆ ವಾಹನವನ್ನು ನಿಲ್ಲಿಸಿ ವಾಹನದಲ್ಲಿದ್ದ ಇಬ್ಬರು ಪರಾರಿಯಾಗಲು ಯತ್ನಿಸಿದ್ದು, ಳದಲ್ಲಿದ್ದ ಪೊಲೀಸರು ಅವರನ್ನು ಹಿಡಿದು ವಿಚಾರಿಸಿದ್ದು, ಈ ವೇಳೆ ಸದರಿ ವಾಹನವನ್ನು ಪರಿಶೀಲಿಸಲಾಗಿ ಅಂದಾಜು 6,000/- ಮೌಲ್ಯದ 3. 2 ಮಿಲಿ ಗ್ರಾಂ ಮಾದಕ ವಸ್ತು ಎಂಡಿಎಂಎ ದೊರಕಿರುತ್ತದೆ.
ಈ ಬಗ್ಗೆ ಮುಂದಿನ ಕಾನೂನುಕ್ರಮಕ್ಕಾಗಿ ಮಾದಕ ವಸ್ತು ಎಂಡಿಎಂಎ ನೊಂದಿಗೆ ಇಬ್ಬರು ಆರೋಪಿಗಳನ್ನು ಹಾಗೂ ಆರೋಪಿಗಳ ಬಳಿಯಿದ್ದ 2 ಮೊಬೈಲ್ ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 108/2023 ಕಲಂ:8(c) 22(b)NDPS Act r/w 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.