ನಾಳೆಯಿಂದ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿರಲಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿ ಮಾರ್ಗಸೂಚಿಯನ್ನು ಜಿಲ್ಲಾಧಿಕಾರಿಯವರು ಬಿಡುಗಡೆಗೊಳಿಸಿದ್ದು, ಪೂರ್ತಿ ಮಾಹಿತಿ ಇಲ್ಲಿದೆ.👇👇
ಯಾವುದೇ ದ್ವಿಚಕ್ರ ವಾಹನಗಳು ಸೇರಿದಂತೆ ಪ್ರಯಾಣಿಕರ ವಾಹನಗಳ ಓಡಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
♦️ಬೆಳಿಗ್ಗೆ 6- 9 ಅಗತ್ಯ ವಸ್ತುಗಳ ದಿನಸಿ ತರಕಾರಿ ಅಂಗಡಿಗಳು ತೆರೆಯಲು ಅವಕಾಶವಿದೆ. ಆದರೆ ಸಾರ್ವಜನಿಕರು ನಡೆದು ಹೋಗಿ ಖರೀದಿ ಮಾಡಬೇಕು.
ವಾಹನಗಳಲ್ಲಿ ಹೋಗುವಂತಿಲ್ಲ.10 ಗಂಟೆ ಒಳಗೆ ಎಲ್ಲಾ ಅಂಗಡಿಗಳನ್ನು ಮುಚ್ಚಬೇಕು
♦️ಅತ್ಯಾವಶ್ಯಕ ವಸ್ತುಗಳ ಸಾಗಿಸುವ ಗೂಡ್ಸ್ ವಾಹನಗಳ ಓಡಾಟಕ್ಕೆ ಅವಕಾಶವಿದೆ.
♦️ಕೃಷಿ ಚಟುವಟಿಕೆಗಳಿಗೆ ಕಾರ್ಮಿಕರು ಹೋಗಲು ವಾಹನ ಅಗತ್ಯವಿದ್ದಲ್ಲಿ ತಹಶಿಲ್ದಾರರ ಕಚೇರಿಯಲ್ಲಿ ಕಡ್ಡಾಯವಾಗಿ ವಾಹನದ ಪಾಸ್ ಪಡೆದು ಓಡಾಡಬೇಕು.ಶೇ೫೦ ಮಾತ್ರ ಪ್ರಯಾಣಕ್ಕೆ ಅವಕಾಶ (ಮಾಲೀಕರು ಸೇರಿ).
♦️ಮದುವೆ ಕಾರ್ಯಕ್ರಮಗಳಿಗೆ ಅನುಮತಿ ಪಡೆದ 25 ಜನಕ್ಕೆ ಮಾತ್ರ ಅವಕಾಶ.
♦️ಅಂತರ್ ಜಿಲ್ಲೆ ಓಡಾಟ ಸಂಪೂರ್ಣ ನಿಷೇಧ. ಹೊರ ಜಿಲ್ಲೆ ರಾಜ್ಯದಿಂದ ಬಂದವರ ಮಾಹಿತಿಯನ್ನು ಸಂಗ್ರಹಿಸಬೇಕು. ಮನೆಯಲ್ಲಿ ಕ್ವಾರಂಟೈನ್ ಆಗಲು ತಿಳಿಸಬೇಕು.
♦️ತುರ್ತು ಆರೋಗ್ಯ ಸಮಸ್ಯೆ ಇದ್ದಲ್ಲಿ ಪ್ರಯಾಣಿಕರ ವಾಹನದ ಮೂಲಕ ಆಸ್ಪತ್ರೆ ಹೋಗಲು ಅನುಮತಿಸಿದೆ.
♦️ಕೋವಿಡ್ ವ್ಯಾಕ್ಸಿನೇಷನ್ ತೆಗೆದುಕೊಳ್ಳುಲು ಹೋಗುವವರು ರಿಜಿಸ್ಟ್ರೇಷನ್ ಮೆಸೇಜು ತೋರಿಸಬೇಕು.
♦️ತಳ್ಳು ಗಾಡಿ, ಟಂಟಂ ಗೂಡ್ಸ್ ಮೂಲಕ ತರಕಾರಿ ಮಾರಾಟವನ್ನು ಬೀದಿಗಳಿಗೆ ತೆರಳಿ ಮಾಡಲು ಬೆಳಿಗ್ಗೆ 6ರಿಂದ -ಸಂಜೆ 6ವರೆಗೆ ಅವಕಾಶವಿದೆ.
♦️ ಛತ್ರ ಸಮುದಾಯ ಭವನ,ದೇವಸ್ಥಾನದಲ್ಲಿ ಮದುವೆ ನಿಷೇಧಿಸಲಾಗಿದೆ. ಮದುವೆಗೆ 25 ಜನ ಮಿತಿಗೆ ಒಳಪಟ್ಟು ಅವಕಾಶವಿದೆ.
♦️ಯಾವುದೆ ಗುಂಪು ಸೇರುವಂತಿಲ್ಲ.
♦️ನಿಷೇಧ ಉಲ್ಲಂಘಿಸಿ ಓಡಾಡುವ ವಾಹನಗಳು ಮತ್ತು ಅನಗತ್ಯ ಓಡಾಡುವ ವ್ಯಕ್ತಿಗಳ ಮೇಲೆ FIR/ದಂಡ/ವಾಹನಗಳ ಸೀಜ್ ಮಾಡಲಾಗುತ್ತದೆ.
♦️ಶವ ಸಂಸ್ಕಾರಕ್ಕೆ 5 ಜನರ ಮಿತಿ
♦️ಹೋಟೆಲ್ ಬಾರ್ ಪಾರ್ಸೆಲ್ ಮಾತ್ರ ಅವಕಾಶ.
♦️ಅಗತ್ಯ ಸರ್ಕಾರಿ ಸೇವೆಯಲ್ಲಿ ಇರುವ ಸಿಬ್ಬಂದಿಗಳು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತೋರಿಸಬೇಕು.