ಪುತ್ತೂರು : ಮೇ.13ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ‘ಪ್ರತಿಷ್ಠಾ ವರ್ಧಂತಿ’ ಈ ನಿಟ್ಟಿನಲ್ಲಿ ದೇವರಿಗೆ ವಿವಿಧ ಸೇವೆಗಳ ನಡೆಯುತ್ತಿದೆ.
ಕೊರೊನಾ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಸಾರ್ವಜನಿಕ ನಿರ್ಬಂಧವಿರುವುದರಿಂದ ಮನಸ್ಸಿನಲ್ಲಿಯೇ ದೇವರನ್ನು ಪ್ರಾರ್ಥಿಸಿ, ದೇವರ ಕೃಪೆಗೆ ಪಾತ್ರ ರಾಗೋಣ ಎಂದು ದೇವಳದ ವ್ಯವಸ್ಥಾಪನಾ ಅಧ್ಯಕ್ಷರಾದಂತಹ ಕೇಶವ ಪ್ರಸಾದ್ ಮುಳಿಯ ರವರು ತಿಳಿಸಿದ್ದಾರೆ.
ಈ ಬಗ್ಗೆ ಮಾತಾನಾಡಿದ ಅವರು ದೇವರ ಪ್ರತಿಷ್ಠಾ ವರ್ಧಂತಿಯ ನಿಟ್ಟಿನಲ್ಲಿ ದೇವರಿಗೆ ವಿವಿಧ ಸೇವೆಗಳು ನಡೆಯುತ್ತಿದೆ. ರುದ್ರಾಹೋಮ ಹಾಗೂ ಚಂಡಿಕಾಹೋಮಗಳು ನಡೆದಿದ್ದು, ಪ್ರಪಂಚವನ್ನೇ ಆಕ್ರಮಿಸಿಕೊಂಡಿರುವಂತಹ ಮಾಹಾಮಾರಿ ಕೊರೊನಾ ನಿವಾರಣೆ ಆಗಬೇಕು ಹಾಗೇ ರೋಗವು ಬಂದಲ್ಲಿ ಸಣ್ಣ ಪ್ರಮಾಣದಲ್ಲಿಯೇ ಅದು ಗುಣಮುಖವಾಗಬೇಕು ಎಂಬ ನಿಟ್ಟಿನಲ್ಲಿ ಆರೋಗ್ಯ ಕರುಣಿಸುವ ದೇವರಾದ ವಿಷ್ಣುವಿನ ರೂಪವಾದಂತಹ ಧನ್ವಂತರಿಯನ್ನು ಪ್ರಾರ್ಥಿಸುವಂತಹ ‘ಧನ್ವಂತರಿ ಹೋಮವು’ ಇಂದು ದೇವರ ಸನ್ನಿಧಿಯಲ್ಲಿ ನಡೆಯುತ್ತಿದೆ.
ನಾಳೆ ದಿನ ಪೂರ್ವ ಸಂಕಲ್ಪದಂತೇ “ಅನ್ನಪೂರ್ಣ ಮಹಾ ಸತ್ರ” ನಡೆಯಬೇಕಿತ್ತು, ಪ್ರತಿ ಮನೆಗಳಿಂದ ಜನರು ಬೋಗಸೆ ಅಕ್ಕಿಯನ್ನು ತಂದು ಅದನ್ನು ದೇವರಿಗೆ ಸಮರ್ಪಿಸಿ ದೇವರಿಗೆ ನೈವೇದ್ಯ ಮಾಡುವಂತಹ ಸಂಕಲ್ಪವನ್ನು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅರ್ಚಕ ವೃಂದ ಕೈಗೊಂಡಿತ್ತು ಆದರೆ ಅನಿವಾರ್ಯ ಕಾರಣಗಳಿಂದ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದ್ದು, ಆದರೆ ದೇವಳದಲ್ಲಿ “ಅನ್ನ ಪೂರ್ಣ ಹವನ” ವು ನಾಳೆ ನಡೆಯಲಿದೆ.
ಅನ್ನಪೂರ್ಣೇ ಕೃಪೆ ಯಾವತ್ತೂ ನಮಗೆ ಅತ್ಯಾಗತ್ಯ, ಪ್ರತಿ ಮನೆಯಲ್ಲಿ ಅನ್ನಕ್ಕೆ ಯಾವ ಕೊರತೆಯೂ ಬಾರದೇ ಇರಲಿ, ದೇವಳದ ಅನ್ನಪೂರ್ಣ ಛತ್ರ ಅತ್ಯಂತ ಸುಂದರವಾಗಿ ಮೂಡಿ ಬರಲಿ ಎಂದು ಈ ಪ್ರಾರ್ಥನೆಯನ್ನು ಕೈಗೊಳ್ಳುತ್ತಿದ್ದು, ಈ ಕಾರ್ಯಕ್ಕೆ ಪ್ರತಿ ಮನೆಯಿಂದ ಪ್ರತಿ ಹಿಂದೂಗಳು ಭಾಗಿಯಾಗುವುದು ಅತ್ಯಾಗತ್ಯ ಹಾಗಾಗಿ ನಾವು ಮೊದಲೇ ಸಂಕಲ್ಪ ಮಾಡಿದಂತೇ ದೇವಳಕ್ಕೆ ತರಲು ಸಾಧ್ಯವಾಗದೇ ಇದ್ದರೂ ಸೀಮೆಯ ಪ್ರತಿಯೊಂದು ಮನೆಯ ಭಗಿನಿಯರು ಬೊಗಸೆ ಅಕ್ಕಿಯ ಪಾಯಸ ಮಾಡಿ ಆ ಪಾಯಸವನ್ನು ದೇವರಿಗೆ ನೈವೇದ್ಯ ಮಾಡಿ, 11 ಗಂಟೆಗೆ ದೇವರ ಕೋಣೆಯಲ್ಲಿ/ ಮಂಟಪದಲ್ಲಿ ಇಡುವಂತದ್ದು, ದೇವಳದಲ್ಲಿ ನೈವೇದ್ಯದ ಸಂದರ್ಭದಲ್ಲಿ ದೇವರಿಗೆ ಸಮರ್ಪಣೆ ಮಾಡುವ ಕಾರ್ಯವನ್ನು ತಂತ್ರಿಗಳು ನಡೆಸುತ್ತಾರೆ. 12 ಗಂಟೆಯ ನಂತರ ಪ್ರಸಾದವನ್ನು ಸ್ವೀಕರಿಸುವಂತಹ ಕೆಲಸವನ್ನು ಮಾಡಬಹುದು. ಈ ಕಾರ್ಯವನ್ನು ನಾಳೆ ಹಿಂದೂ ಭಾಂದವರು ತಮ್ಮ ಮನೆಗಳಲ್ಲಿ ಕೈಗೊಳ್ಳಬೇಕು, ತಮ್ಮೆಲ್ಲರಿಗಾಗಿ ನಾವು ದೇವಳದಲ್ಲಿ ಪ್ರಾರ್ಥಿಸುತ್ತೇವೆ. ಧನ್ವಂತರಿ ಹೋಮದಲ್ಲಿಯೂ ಪುತ್ತೂರು ಸೀಮೆ ಹಾಗೂ ಸರ್ವರಿಗೂ ಕೊರೊನಾ ಮಹಾಮಾರಿಯಿಂದ ಮುಕ್ತಿಯಾಗಬೇಕು ಪ್ರಾರ್ಥಿಸಿದ್ದೇವೆ.
ದೇವಳದಲ್ಲಿ ಸಾರ್ವಜನಿಕ ನಿರ್ಬಂಧವಿರುವುದರಿಂದ ಪ್ರವೇಶಕ್ಕೆ ಸಾಧ್ಯವಾಗುತ್ತಿಲ್ಲ ಆದರೆ ಮನಸ್ಸಿನಲ್ಲಿಯೇ ನಾವು ದೇವರನ್ನು ಪ್ರಾರ್ಥಿಸೋಣ ದೇವರ ಕೃಪೆ ಪಾತ್ರರಾಗೋಣ ಎಂದು ದೇವಳದ ವ್ಯವಸ್ಥಾಪನಾ ಅಧ್ಯಕ್ಷರಾದಂತಹ ಕೇಶವ ಪ್ರಸಾದ್ ಮುಳಿಯರವರು ತಿಳಿಸಿದ್ದಾರೆ.
“ಅನ್ನಪೂರ್ಣೇ ಸದಾಪೂರ್ಣೇ ಶಂಕರಪ್ರಾಣವಲ್ಲಭೇ |
ಜ್ಞಾನವೈರಾಗ್ಯಸಿದ್ಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತಿ”